Select Your Language

Notifications

webdunia
webdunia
webdunia
webdunia

ಕ್ಯಾರಮಲ್ ಪಾಯಸ

ಕ್ಯಾರಮಲ್ ಪಾಯಸ
ಬೆಂಗಳೂರು , ಬುಧವಾರ, 13 ಫೆಬ್ರವರಿ 2019 (15:39 IST)
ಯಾವುದೇ ಹಬ್ಬ-ಹರಿದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಮಾಡುವುದು ಪಾಯಸವೇ. ವೈವಿಧ್ಯಮಯವಾದ ಪದಾರ್ಥಗಳಿಂದ ವಿಧ ವಿಧವಾದ ಪಾಯಸವನ್ನು ತಯಾರಿಸಿ ಸವಿಯಬಹುದು. ಅಂತಹ ದಿಡೀರ್ ಎಂದು ತಯಾರಿಸುವ ಪಾಯಸದಲ್ಲಿ ಕ್ಯಾರಮಲ್ ಪಾಯಸವೂ ಒಂದು. 
 ತಯಾರಿಸಲು ಬೇಕಾಗುವ ಸಾಮಗ್ರಿಗಳು:
 
* ಹಾಲು ಅರ್ಧ ಲೀಟರ್
* ಅಕ್ಕಿ ಹಿಟ್ಟು 2 ಚಮಚ
* ಸಕ್ಕರೆ ಅರ್ಧ ಬಟ್ಟಲು
* ಸ್ವಲ್ಪ ಗೋಡಂಬಿ
* ಸ್ವಲ್ಪ ದ್ರಾಕ್ಷಿ
* ಸ್ವಲ್ಪ ಬಾದಾಮಿ
* ಸ್ವಲ್ಪ ಏಲಕ್ಕಿ
   
ತಯಾರಿಸುವ ವಿಧಾನ:
 
ಮೊದಲಿಗೆ ಅರ್ಧ ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ಸಕ್ಕರೆಯನ್ನು ಹಾಕಿ ಆರಲು ಬಿಡಬೇಕು. ನಂತರ ಸ್ವಲ್ಪ ಹಾಲಿಗೆ 2 ಚಮಚ ಅಕ್ಕಿ ಹಿಟ್ಟನ್ನು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿಕೊಂಡು ಕುದಿಯುತ್ತಿರುವ ಹಾಲಿಗೆ ಹಾಕಿ ಮತ್ತೊಂದು 5 ನಿಮಿಷ ಕುದಿಸಬೇಕು. ನಂತರ ಒಂದು ಪಾತ್ರೆಯಲ್ಲಿ ಎರಡು ಚಮಚ ಸಕ್ಕರೆಯನ್ನು ಹಾಕಿ ಕ್ಯಾರಮಲ್ ಮಾಡಿಕೊಳ್ಳಬೇಕು.

ಅದರಲ್ಲಿ ಸಕ್ಕರೆಯು ಕರಗಿ ಸ್ವಲ್ಪ ಕಂದು ಬಣ್ಣ ಬಂದ ತಕ್ಷಣ, ಅದರಲ್ಲಿ ಅರ್ಧ ಬಟ್ಟಲು ಹಾಲನ್ನು ಹಾಕಿ ಕೈ ಆಡಿಸಿ ಕುದಿಯುತ್ತಿರುವ ಹಾಲಿನಲ್ಲಿ ಹಾಕಿ ಮತ್ತೊಮ್ಮೆ 5 ನಿಮಿಷ ಕೈ ಆಡಿಸಬೇಕು ನಂತರ ಅದಕ್ಕೆ  ಗೋಡಂಬಿ, ದ್ರಾಕ್ಷಿ, ಬಾದಾಮಿ, ಏಲಕ್ಕಿಯನ್ನು ಹಾಕಬೇಕು ಈಗ ಕ್ಯಾರೆಮಲ್‌ನಲ್ಲಿ ಹಾಲು ಹಾಕಿದ ತಕ್ಷಣ ಸ್ವಲ್ಪ ಸ್ವಲ್ಪವೇ ನೊರೆ ಬರಲು ಪ್ರಾರಂಭವಾಗುತ್ತದೆ. ಸ್ವಲ್ಪ ಕುದಿಸಿದ ನಂತರ ರುಚಿಯಾದ ಕ್ಯಾರೆಮಲ್ ಪಾಯಸ ಸವಿಯಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ರವಾ ಪೊಂಗಲ್