Select Your Language

Notifications

webdunia
webdunia
webdunia
webdunia

ಬೀಚ್ ವಾಲಿಬಾಲ್ - ಅಮೆರಿಕ ಪಾಲಿಗೆ ಸ್ವರ್ಣ

ಬೀಚ್ ವಾಲಿಬಾಲ್ - ಅಮೆರಿಕ ಪಾಲಿಗೆ ಸ್ವರ್ಣ
ಬೀಜಿಂಗ್ , ಶನಿವಾರ, 23 ಆಗಸ್ಟ್ 2008 (18:05 IST)
ಟೊಡ್ಡ್ ರೋಜರ್ಸ್ ಮತ್ತು ಪಿಲ್ ಡಾಲ್ಹೌಸೆರ್ ಬ್ರೆಜಿಲ್ ಎದುರಾಳಿಗಳನ್ನು ಮೂರು ಸೆಟ್‌‌ಗಳಿಂದ ಪರಾಜಯಗೊಳಿಸುವ ಮೂಲಕ ಬೀಚ್ ವಾಲಿಬಾಲ್ ಚಿನ್ನದ ಪದಕವನ್ನು ಅಮೆರಿಕ ತನ್ನ ಮುಡಿಗೇರಿಸಿಕೊಂಡಿದೆ.

ಕೆರ್ರಿ ವಾಲ್ಶ್ ಮತ್ತು ಮಿಸ್ಟಿ ಮೇ ಟ್ರೆನೋರ್ ತಮ್ಮ ಸತತ ಎರಡನೇ ಚಿನ್ನದ ಪದಕ ಗೆದ್ದ ಒಂದು ದಿನದ ಬಳಿಕ ಟೊಡ್ಡ್ ಮತ್ತು ಪಿಲ್ ತಮ್ಮ ಮೊದಲ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡರು. ಈ ಜೋಡಿ ಬ್ರೆಸಿಲ್‌ನ ಪ್ಯಾಬಿಯೊ ಮತ್ತು ಮಾರ್ಸಿಯೊರನ್ನು 23-21, 17-21, 15-4ದಲ್ಲಿ ಸೋಲಿಸಿತು.

ಇದಕ್ಕೂ ಮುಂಚೆ ಶುಕ್ರವಾರದಂದು ಅಥೇನ್ಸ್ ಚಿನ್ನ ಪದಕದಾರಿಗಳಾದ ಬ್ರೆಸಿಲ್‌ನ ಎಮಾನ್ಯುಲ್ ಮತ್ತು ರಿಕಾರ್ಡೊ ಜಾರ್ಜಿಯಾದ ಜೋರ್ಜ್ ಟೆಕ್ರೀರ ಮತ್ತು ರೆನಟೊ ಗೋಮ್ಸ್‌ರನ್ನು 21-15, 21-10ದಲ್ಲಿ ಸೋಲಿಸಿ, ಕಂಚಿನ ಪದಕವನ್ನು ಗೆದ್ದುಕೊಂಡರು

Share this Story:

Follow Webdunia kannada