ಅಪ್ರಾಪ್ತನೋರ್ವ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಮಾಡಿದ ಪ್ಲಾನ್​ ಏನು ಗೊತ್ತಾ?

ಸೋಮವಾರ, 13 ಆಗಸ್ಟ್ 2018 (14:20 IST)
ನವದೆಹಲಿ : ಚಾಕಲೇಟ್ ಆಸೆ ತೋರಿಸಿ ಅಪ್ರಾಪ್ತನೋರ್ವ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ದೆಹಲಿಯ ರೋಹಿಣಿ ಜಿಲ್ಲೆಯಲ್ಲಿ ನಡೆದಿದೆ.


ರೋಹಿಣಿ ಜಿಲ್ಲೆಯ ಪ್ರಶಾಂತ ವಿಹಾರ ಎಂಬಲ್ಲಿ ಬಾಲಕಿಯ ಕುಟುಂಬ ವಾಸವಿತ್ತು. ಅಲ್ಲದೆ ಆರೋಪಿಯ ಮನೆಯವರೂ ಸಹ ಸಂತ್ರಸ್ತ ಬಾಲಕಿಯ ಮನೆಯ ಪಕ್ಕದಲ್ಲೇ ವಾಸವಿದ್ದರು. ಬಾಲಕಿಯ ಮೇಲೆ ಅತ್ಯಚಾರ ಎಸಗುವ  ಪ್ಲಾನ್​ ಮಾಡಿದ್ದ ಆರೋಪಿಯು ಮನೆಯೆದುರು ಆಟವಾಡುತ್ತಿದ್ದ ಬಾಲಕಿಗೆ  ಚಾಕಲೇಟ್​ ಆಸೆ ತೋರಿಸಿ  ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಈ ಅಮಾನವೀಯ ಕೃತ್ಯ ಎಸಗಿದ್ದಾನೆ. ಮನೆಗೆ ಬಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಕಾರಣ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಈ ವಿಚಾರವನ್ನು  ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.


ಈ ಬಗ್ಗೆ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದು ಅಕ್ಕಪಕ್ಕದ ಮನೆಯವರನ್ನೆಲ್ಲರನ್ನು ಪೊಲೀಸರು ಕೌನ್ಸಲಿಂಗ್​ಗೆ ಕರೆಸಿದಾಗ ಬಾಲಕಿಯು ಆರೋಪಿಯನ್ನು ಗುರುತಿಸಿದ್ದಾಳೆ. ಬಳಿಕ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಯನ್ನು ಬಾಲಾಪರಾಧಿ ಕೇಂದ್ರಕ್ಕೆ ಒಪ್ಪಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING