Select Your Language

Notifications

webdunia
webdunia
webdunia
webdunia

ಪ್ರಧಾನಿಯಾಗಲು ಹೇಳಿ ಮಾಡಿಸಿದ ವ್ಯಕ್ತಿ ಎಂದು ರಾಹುಲ್ ಗಾಂಧಿ ಹೊಗಳಿದ ವೀರಪ್ಪ ಮೊಯಿಲಿ

ಪ್ರಧಾನಿಯಾಗಲು ಹೇಳಿ ಮಾಡಿಸಿದ ವ್ಯಕ್ತಿ ಎಂದು ರಾಹುಲ್ ಗಾಂಧಿ ಹೊಗಳಿದ ವೀರಪ್ಪ ಮೊಯಿಲಿ
ಬೆಂಗಳೂರು , ಗುರುವಾರ, 22 ನವೆಂಬರ್ 2018 (08:57 IST)
ಬೆಂಗಳೂರು: ಪ್ರಧಾನಿಯಾಗಲು ಸೂಕ್ತ ವ್ಯಕ್ತಿ ರಾಹುಲ್ ಗಾಂಧಿ ಎಂದು ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಗಾಂಧಿಯನ್ನು ವಿಪಕ್ಷಗಳ ಮೈತ್ರಿ ಪ್ರಧಾನಿಯಾಗಿ ಆಯ್ಕೆ ಮಾಡಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ವೀರಪ್ಪ ಮೊಯಿಲಿ ಈ ರೀತಿ ಉತ್ತರಿಸಿದ್ದಾರೆ.

‘ಇದರ ಬಗ್ಗೆ ನಾನೇನೂ ಹೇಳಲಾರೆ. ಆದರೆ ಪ್ರಧಾನಿಯಾಗಲು ಹೇಳಿ ಮಾಡಿಸಿದ ವ್ಯಕ್ತಿ ರಾಹುಲ್ ಗಾಂಧಿ’ ಎಂದು ಹೊಗಳಿದ್ದಾರೆ. ಈ ನಡುವೆ ವಿಪಕ್ಷಗಳನ್ನು ಒಗ್ಗೂಡಿಸಿ ಬಿಜೆಪಿಗೆ ಎದುರಾಳಿಯಾಗಿ ಮಹಾಘಟಬಂಧನ್ ನಡೆಸುತ್ತಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪ್ರಯತ್ನವನ್ನೂ ಅವರು ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೋಸ ಮಾಡಿದ ಪ್ರಿಯಕರನನ್ನು ಕೊಂದು ಬಿರಿಯಾನಿ ಮಾಡಿ ಹಂಚಿಬಿಟ್ಟಳು ಪ್ರಿಯತಮೆ