Select Your Language

Notifications

webdunia
webdunia
webdunia
webdunia

ಬಾಲಿಕಾ ಗೃಹದಲ್ಲಿನ ಲೈಂಗಿಕ ಕಿರುಕುಳ ಹಗರಣ ; ತನಿಖೆಯಿಂದ ಆಘಾತಕಾರಿ ಅಂಶ ಬಹಿರಂಗ

ಬಾಲಿಕಾ ಗೃಹದಲ್ಲಿನ ಲೈಂಗಿಕ ಕಿರುಕುಳ ಹಗರಣ ; ತನಿಖೆಯಿಂದ ಆಘಾತಕಾರಿ ಅಂಶ ಬಹಿರಂಗ
ಪಾಟ್ನಾ , ಮಂಗಳವಾರ, 8 ಜನವರಿ 2019 (07:13 IST)
ಪಾಟ್ನಾ : ಬಿಹಾರದ ಮುಝಫ್ಫರಪುರ ಸರಕಾರಿ ಬಾಲಿಕಾ ಗೃಹದಲ್ಲಿನ ಲೈಂಗಿಕ ಕಿರುಕುಳ ಹಗರಣದ  ತನಿಖೆ ನಡೆಸುತ್ತಿರುವ ಸಿಬಿಐಗೆ ಆಘಾತಕಾರಿ ವಿಚಾರವೊಂದು ತಿಳಿದುಬಂದಿದೆ.


ಹಲವಾರು ವರ್ಷಗಳಿಂದ ಈ ಬಾಲಿಕಾಶ್ರಮವನ್ನು ನಡೆಸುತ್ತಿದ್ದ ಬೃಜೇಶ್ ಠಾಕೂರ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಆಡಳಿತ ಜೆಡಿ(ಯು) ಸರಕಾರದ ಸಮೀಪವರ್ತಿಯೆಂದು ಹೇಳಲಾಗುತ್ತಿತ್ತು. ಈತ ಬಾಲಿಕಾ ಗೃಹದ ಬಾಲಕಿಯರಿಗೆ ಅಂಗಾಂಗ ಪ್ರದರ್ಶಿಸುವಂತಹ ಬಟ್ಟೆಗಳನ್ನು ಧರಿಸುವಂತೆ ಬಲವಂತ ಪಡಿಸಿ ನಂತರ ಅಶ್ಲೀಲ ಭೋಜಪುರಿ ಹಾಡುಗಳಿಗೆ ಅವರು ಕುಣಿಯುವಂತೆ ಮಾಡಿ, ಅಮಲು ಔಷಧಿ ನೀಡಿ ನಂತರ ಬೃಜೇಶ್ ಠಾಕೂರ್ ನ ಅತಿಥಿಗಳು ಅವರ ಮೇಲೆ ಅತ್ಯಾಚಾರವೆಸಗುತ್ತಿದ್ದರು, ಅಲ್ಲದೇ ವಿರೋಧಿಸಿದ ಬಾಲಕಿಯರಿಗೆ ಥಳಿಸಿ ಹಿಂಸಿಲಾಗುತ್ತಿತ್ತು ಎಂದು ಸಿಬಿಐ ತನಿಖೆಯಿಂದ ತಿಳಿದುಬಂದಿದೆ.


ಈ ಬೃಹತ್ ಲೈಂಗಿಕ ಹಗರಣದಲ್ಲಿ ಹಲವಾರು ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕೈವಾಡವಿದೆಯೆಂದು ಶಂಕಿಸಲಾಗಿದೆ. ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಶ್ರಮದ 42 ಬಾಲಕಿಯರ ಪೈಕಿ 34 ಮಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ದೃಢಪಟ್ಟಿದೆ. ಆಶ್ರಯ ತಾಣದ ಕಟ್ಟಡವನ್ನು ಈಗ ಕೆಡವಲಾಗಿದೆ. ಬೃಜೇಶ್ ಠಾಕುರ್ ಹಾಗೂ ಆಶ್ರಯ ತಾಣದ ಸಿಬ್ಬಂದಿ ಸೇರಿದಂತೆ 20 ಮಂದಿಯ ವಿರುದ್ಧ ಈಗಾಗಲೇ ಪೋಕ್ಸೋ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಪ್ ರಹಿತ ಎಟಿಎಂ ಕಾರ್ಡ್ ಬದಲಾಯಿಸದ ಗ್ರಾಹಕರಿಗೆ ಆರ್.ಬಿ.ಐ ನೀಡಿದೆ ಈ ಸೂಚನೆ