Select Your Language

Notifications

webdunia
webdunia
webdunia
webdunia

ರಾಹುಲ್ ಬದಲಿಗೆ ಪ್ರಿಯಾಂಕಳಿಗೆ ನಾಯಕತ್ವ ನೀಡಿ

ರಾಹುಲ್ ಬದಲಿಗೆ ಪ್ರಿಯಾಂಕಳಿಗೆ ನಾಯಕತ್ವ ನೀಡಿ
ನವದೆಹಲಿ , ಸೋಮವಾರ, 19 ಮೇ 2014 (16:31 IST)
ಕಾಂಗ್ರೆಸ್ಸಿನ ಎರಡನೇ ನಾಯಕ ರಾಹುಲ್ ಗಾಂಧಿಯನ್ನು ಗುರಿಯಾಗಿರಿಸಿಕೊಂಡಿರುವ ಒಂದು ಸಣ್ಣ ಪೋಸ್ಟರ್ ಒಂದು ಅಲಹಾಬಾದ್‌ನಲ್ಲಿ ಕಂಡು ಬಂದಿದ್ದು, ರಾಹುಲ್ ಬದಲಿಗೆ ಅವರ ಸ್ಥಾನದಲ್ಲಿ ಪ್ರಿಯಾಂಕಾ ಗಾಂಧಿಯನ್ನು ಕುರಿಸುವಂತೆ ಅದರಲ್ಲಿ ಸಲಹೆ ನೀಡಲಾಗಿದೆ.
                                                                                                                                                                                                                                 













ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಹಸೀಬ್ ಅಹಮದ್ ಈ ಪೋಸ್ಟರ್‌ನ್ನು ಅಂಟಿಸಿದ್ದು, ಪ್ರಿಯಾಂಕಾ ಗಾಂಧಿ (42) ಸಹೋದರ ರಾಹುಲ್ ಗಾಂಧಿ , ಪ್ರಚಾರದ ನೇತೃತ್ವ ವಹಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಇದುವರೆಗಿನ ಚುನಾವಣಾ ಇತಿಹಾಸದಲ್ಲಿ ಅತಿ ಕೆಟ್ಟ ಸಾಧನೆ ಮಾಡಿದ್ದು, ಕೇವಲ 44 ಸ್ಥಾನಗಳಲ್ಲಿ ಗೆಲುವನ್ನು ದಾಖಲಿಸಿದೆ. ಆದ್ದರಿಂದ ಇನ್ನು ಮೇಲೆ ಪ್ರಿಯಾಂಕಾ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಬೀಳಲಿದೆ ಎಂದು ಹಸೀಬ್ ಅಹಮದ್ ಹೇಳುತ್ತಾರೆ. 
 
ಅತಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ಗೆದ್ದಿದ್ದು, ರಾಹುಲ್ ಮತ್ತು ಸೋನಿಯಾ ಮಾತ್ರ ಅಲ್ಲಿ ಗೆಲುವನ್ನು ಸಾಧಿಸಿದ್ದಾರೆ. 
 
ಪ್ರಿಯಾಂಕಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ತನ್ನ ತಾಯಿ ಮತ್ತು ಅಣ್ಣನಿಗಾಗಿ ಪ್ರಚಾರ ನಡೆಸಿದ್ದ ಅವರು   ಬಿಜೆಪಿಯ ಅಭೂತಪೂರ್ಣ ಗೆಲುವಿಗೆ ಕಾರಣರಾಗಿರುವ ನರೇಂದ್ರ ಮೋದಿ ಮೇಲೆ ಆಕ್ರಮಣಕಾರಿ ವಾಗ್ದಾಳಿಯನ್ನು ನಡೆಸಿದ್ದರು.
 
ಅಹ್ಮದ್ ಪ್ರಿಯಾಂಕಾಳ ಕಟ್ಟಾ ಅಭಿಮಾನಿ. ಈ ಹಿಂದೆ ಕೂಡ ಅವರು ಪ್ರಿಯಾಂಕಾ ಪರ ಪೋಸ್ಟರ್‌ನ್ನು ಹಾಕಿದ್ದರು. ಆದರೆ ಅದನ್ನು ಅಶಿಸ್ತು ಎಂದು ಪರಿಗಣಿಸಿದ  ಕಾಂಗ್ರೆಸ್ ಅದನ್ನು ತಾತ್ಕಾಲಿಕವಾಗಿ ತೆಗೆದುಹಾಕಿತ್ತು.  
ತನ್ನ ಸಹೋದರ ರಾಜಕೀಯಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾನೆ. ಆದರೆ ತಾನು ಔಪಚಾರಿಕವಾಗಿ ರಾಜಕೀಯ ಸೇರಲು ಬಯಸುತ್ತಿಲ್ಲ ಎಂದು ಪ್ರಿಯಾಂಕಾ ಹೇಳಿದ್ದರು. 
 
ದೆಹಲಿಯಲ್ಲಿಂದು ಸಭೆ ಸೇರಲಿರುವ ಕಾಂಗ್ರೆಸ್ 'ಉನ್ನತ ನಾಯಕರು, ಪಕ್ಷದ ಹೀನಾಯ ಸೋಲಿನ ಬಗ್ಗೆ ಚರ್ಚೆ ನಡೆಸಲಿದ್ದಾರೆ.  ತೀವ್ರ ಟೀಕೆಗಳ ಹೊರತಾಗಿಯೂ, ಅನೇಕ ಭಟ್ಟಂಗಿಗಳು ಈ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲ ಎಂದು ಹೇಳುತ್ತಿದ್ದಾರೆ.  

Share this Story:

Follow Webdunia kannada