Select Your Language

Notifications

webdunia
webdunia
webdunia
webdunia

ಬಾಬಾ ರಾಮದೇವ್ ಮಹಾತ್ಮರಂತೆ : ಅರುಣ್ ಜೇಟ್ಲಿ

ಬಾಬಾ ರಾಮದೇವ್ ಮಹಾತ್ಮರಂತೆ : ಅರುಣ್ ಜೇಟ್ಲಿ
ನವದೆಹಲಿ , ಸೋಮವಾರ, 19 ಮೇ 2014 (09:54 IST)
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಬೀಗುತ್ತಿರುವ ಬಿಜೆಪಿಯ  ಹಿರಿಯ ನಾಯಕರು ಮತದಾರರಲ್ಲಿ "ಜಾಗೃತಿ"  ಮೂಡಿಸಿದ್ದಕ್ಕಾಗಿ, ಬಾಬಾ ರಾಮದೇವ್  ಅವರಿಗೆ "ಧನ್ಯವಾದ" ಗಳನ್ನು ಅರ್ಪಿಸಿದರಲ್ಲದೆ, ಅವರ ಪ್ರಯತ್ನಗಳನ್ನು ರಾಷ್ಟ್ರೀಯ ನಾಯಕರಾದ ಮಹಾತ್ಮ ಗಾಂಧಿ ಮತ್ತು ಪ್ರಕಾಶ್ ನಾರಾಯಣ್ ಕೈಗೊಂಡ  ಹೋರಾಟಗಳಿಗೆ ಹೋಲಿಸಿದ್ದಾರೆ.
 
"ಮತದಾರರಲ್ಲಿ ಜಾಗೃತಿಯನ್ನು ಕೈಗೊಳ್ಳಲು ಬಾಬಾ ಕೈಗೊಂಡ ಪ್ರಯತ್ನಗಳು ಮಹಾತ್ಮಾ ಗಾಂಧಿ ಮತ್ತು ಜಯಪ್ರಕಾಶ್  ನಾರಾಯಣರ ಹೋರಾಟದಂತಿದ್ದವು" ಎಂದು ಪಕ್ಷದ ನಾಯಕ ಜೇಟ್ಲಿ ಹೇಳಿದ್ದಾರೆ.  
 
ಬಿಜೆಪಿ ಗೆಲುವನ್ನು ಅಭಿನಂದಿಸಲು ರಾಮದೇವ್ ಅನುಯಾಯಿಗಳು ಹಮ್ಮಿಕೊಂಡಿದ್ದ 'ಸಂಕಲ್ಪಪೂರ್ತಿ ಮಹೋತ್ಸವ' ದಲ್ಲಿ ಜೇಟ್ಲಿ ಮಾತನಾಡುತ್ತಿದ್ದರು. 
 
"ವ್ಯವಸ್ಥೆಯನ್ನು ಬಲಿಷ್ಠಗೊಳಿಸುವುದು ಅವರ ಗುರಿ. ಕಪ್ಪು ಹಣ ಮತ್ತು ಭೃಷ್ಟಾಚಾರದ ವಿರುದ್ಧದ ಅವರ ಹೋರಾಟ ರಾಷ್ಟ್ರನಾಯಕರಾದ ಮಹಾತ್ಮಾ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ ಹೋರಾಟಗಳಿಗೆ ಹೋಲಿಕೆಯಾಗುತ್ತದೆ" ಎಂದು ಜೆಟ್ಲಿ ಹೇಳಿದರು. 
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸೋಲುವವರೆಗೂ ಹರಿದ್ವಾರದಲ್ಲಿರುವ ಪತಂಜಲಿ ಆಶ್ರಮಕ್ಕೆ ಮರಳುವುದಿಲ್ಲ ಎಂದು ಯೋಗ ಗುರು ಪಣ ತೊಟ್ಟಿದ್ದರು.
 
ಜೇಟ್ಲಿ ಜತೆ ಪಕ್ಷದ ಅಧ್ಯಕ್ಷರಾದ ರಾಜನಾಥ್ ಸಿಂಗ್ ಕೂಡ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಚುನಾವಣಾ ಹೋರಾಟದಲ್ಲಿ ಬೆಂಬಲ ನೀಡಿದ್ದಕ್ಕಾಗಿ ಅವರು ಬಾಬಾರಿಗೆ ಧನ್ಯವಾದಗಳನ್ನರ್ಪಿಸಿದರು. 
 
"ನಿಮ್ಮ ಕಾಣಿಕೆಗಾಗಿ ನಾನು ಆಭಾರಿಯಾಗಿದ್ದೇನೆ. ನೀವು ಪಕ್ಷಕ್ಕಾಗಿ ಕೆಲಸ ಮಾಡಿಲ್ಲ. ಬದಲಾಗಿ ದೇಶಕ್ಕಾಗಿ ಕೆಲಸ ಮಾಡಿದರು" ಎಂದು ಸಿಂಗ್ ಹೇಳಿದರು. 
 
ಯೋಗಗುರು ಬಾಬಾರ ಅನುಯಾಯಿಗಳು ದೇಶಾದ್ಯಂತ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 

Share this Story:

Follow Webdunia kannada