Select Your Language

Notifications

webdunia
webdunia
webdunia
webdunia

ತೃತೀಯರಂಗದ ನಾಯಕರ ಪ್ರಧಾನಿ ಗಾದಿ ಕನಸಿಗೆ ಬರೆ ಎಳೆದ ಮೋದಿ ಅಲೆ

ತೃತೀಯರಂಗದ ನಾಯಕರ ಪ್ರಧಾನಿ ಗಾದಿ ಕನಸಿಗೆ ಬರೆ ಎಳೆದ ಮೋದಿ ಅಲೆ
ನವದೆಹಲಿ , ಗುರುವಾರ, 22 ಮೇ 2014 (18:54 IST)
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಇಡೀ ಜಾತ್ಯತೀತ ವಿಭಾಗದ ಪಕ್ಷಗಳ ಗೆಲುವನ್ನು  ಸಮಾಧಿ ಮಾಡಿದ್ದದ್ದಲ್ಲದೇ,  ಅದರ ಉನ್ನತ ನಾಯಕರ ಪ್ರಧಾನಿ ಕನಸುಗಳನ್ನು ಕೂಡ ಪುಡಿ ಪುಡಿ ಮಾಡಿದೆ.  
 
ಜಾತ್ಯತೀತ ಶಿಬಿರದಲ್ಲಿ ಅನೇಕ ನಾಯಕರು ಪ್ರಧಾನಿ ಆಗುವ ಮಹತ್ವಾಕಾಂಕ್ಷೆಯನ್ನು ಹೊತ್ತು ಕುಳಿತಿದ್ದರು.  ವೈಯಕ್ತಿಕ ಕನಸುಗಳನ್ನು ಪೂರೈಸಿಕೊಳ್ಳಲು ಒಂದಾಗಿ ಮೋದಿ ಎದುರು ಸವಾರಿ ಹೊರಟಿದ್ದ ಅವರ ಉದ್ದೇಶಕ್ಕೆ ಮೋದಿ ಎದುರು ತಡೆಯಲೇ ಇಲ್ಲ. ಮೋದಿಯವರ ಕರೆಗೆ ಸ್ಪಂದಿಸಿದ ಮತದಾರರು  ಅವರ ದಾರಿಗಡ್ಡಿಯಾಗಿ ಬರಲಿದ್ದ ಎಲ್ಲರನ್ನು  ಸೋಲಿಸಿದರು.
 
ತೃತೀಯ ರಂಗವನ್ನು ರಚಿಸಲು ಹೊರಟಿದ್ದ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಪ್ರಯತ್ನ  ನಾಯಕರ ಸ್ವಾಭಿಮಾನಗಳ ಭಾರಕ್ಕೆ ಕುಸಿದು ಹೋಯಿತು.  ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ತನ್ನದೇ ಆದ ಒಂದು ಹಾದಿಯನ್ನು ತುಳಿದರೇ,  ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ "ಏಕಾಂಗಿ ನಡೆ" (ವಾಕ್ ಅಲೋನ್) ತತ್ವವನ್ನು ಅನುಸರಿಸಿದರು. ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ನಾಮನಿರ್ದೇಶನದ ನಂತರ ಬಿಜೆಪಿ ಜತೆ ಸಂಬಂಧಗಳನ್ನು ಕಡಿದುಕೊಳ್ಳುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತ್ಯತೀತತೆ ಚಾಂಪಿಯನ್  ಆಗ ಹೊರಟಿದ್ದರು. 
 
ಬಿಹಾರದಲ್ಲಿ  ಮೇಲುಗೈ ಸಾಧಿಸಲು ಜಾತ್ಯಾತೀತ ಮನೋಭಾವದ ಪ್ರತಿಸ್ಪರ್ಧಿ ಲಾಲು ಪ್ರಸಾದ್ ಜೊತೆ ಕೈ ಮಿಲಾಯಿಸಲು ಕುಮಾರ್ ಸಿದ್ಧರಾದರು. ಎರಡೂ ಪಕ್ಷಗಳ ಬೆಂಬಲಿಗರು ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ, ಎಡಪಕ್ಷಗಳೊಂದಿಗೆ ವೀಲಿನಗೊಳ್ಳಬೇಕು ಎನ್ನುವುದು ವಾಸ್ತವತೆಗೆ ವಿರೋಧವಾಗಿತ್ತು. ಮುಸ್ಲಿಂ ಓಟ್ ಬ್ಯಾಂಕಿಂಗ್‌ ನಂಬಿಕೊಂಡಿದ್ದ  ಮಾಜಿ ಮುಖ್ಯಮಂತ್ರಿ ಬಿಎಸ್‌ಪಿ ನಾಯಕಿ ಮಾಯಾವತಿ ಕೂಡಾ ತಮ್ಮ ಸಾಂಪ್ರದಾಯಿಕ ಎದುರಾಳಿಯಾದ ಮುಲಾಯಂ ಜೊತೆ ವೇದಿಕೆ ಹಂಚಿಕೊಳ್ಳುವಲ್ಲಿ ವಿಫಲವಾಗಿ ತೃತಿಯ ರಂಗ ಆರಂಭದಲ್ಲಿಯೇ ಅವನತಿಯತ್ತ ಸಾಗಿತ್ತು.   

Share this Story:

Follow Webdunia kannada