Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಇಸ್ರೇಲ್

ಕನ್ನಡದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಇಸ್ರೇಲ್
ಬೆಂಗಳೂರು , ಗುರುವಾರ, 16 ಆಗಸ್ಟ್ 2018 (17:20 IST)
ಬೆಂಗಳೂರು : ಇಸ್ರೇಲ್ ಕನ್ನಡದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಕೋರುವುದರ ಮೂಲಕ ಕನ್ನಡಿಗರ ಮೆಚ್ಚುಗೆಯನ್ನು ಪಡೆದುಕೊಂಡಿದೆ.


ಇಸ್ರೇಲ್  ಭಾರತದ ಜೊತೆ  ಉತ್ತಮ ಸಂಬಂಧವನ್ನು ಹೊಂದಿದ್ದು, ನಿನ್ನೆ ಭಾರತ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಇಸ್ರೇಲ್ ಸರಕಾರದ ವಿದೇಶಾಂಗ ಕಚೇರಿಯ ರಾಯಭಾರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕನ್ನಡ ಸೇರಿದಂತೆ ಪ್ರಮುಖ 4ಭಾಷೆಗಳಲ್ಲಿ ಶುಭ ಕೋರಲಾಗಿದೆ. ಇಂಗ್ಲಿಷ್, ಹಿಂದಿ ಜತೆಗೆ ಕನ್ನಡ ಮತ್ತು ಮರಾಠಿಯಲ್ಲೂ ಭಾರತದ ಸ್ವಾತಂತ್ರ್ಯ ದಿನದ ಶುಭ ಕೋರಿದೆ.


''ಆತ್ಮೀಯ ಭಾರತ, ಸ್ವಾತಂತ್ರ್ಯ ದಿನದ ಶುಭಾಷಯಗಳು!'' ಎಂದು ಕನ್ನಡದಲ್ಲಿ ಶುಭ ಕೋರಿರುವುದು ವೈರಲ್ ಆಗಿದೆ. ಇದು ಕನ್ನಡಿಗರಿಗೆ ಇಸ್ರೇಲ್ ದೇಶ ನೀಡಿರುವ ಸಿಹಿಸುದ್ದಿ ಕೂಡ ಆಗಿದ್ದು, ಇದಕ್ಕೆ  ಕನ್ನಡದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಟಲ್ ಬಿಹಾರಿ ವಾಜಪೇಯಿ ನಿಧನ ಎಂದು ಟ್ವೀಟ್ ಮಾಡಿದ ಬಿ ಎಸ್ ಯಡಿಯೂರಪ್ಪ