ಹುಡುಗರ ಬಳಿ ಹುಡುಗಿಯರು ಮಾತನಾಡುವಂತಿಲ್ಲ! ಕಾಲೇಜೊಂದರ ವಿವಾದಾತ್ಮಕ ನಿರ್ಧಾರ

ಗುರುವಾರ, 6 ಡಿಸೆಂಬರ್ 2018 (09:37 IST)
ನವದೆಹಲಿ: ಈ ಕಾಲೇಜಿನಲ್ಲಿ ಇನ್ನು ಮುಂದೆ ಹುಡುಗಿಯರು ಹುಡುಗರ ಜತೆ ಮಾತನಾಡುವಂತಿಲ್ಲ! ಹೀಗೊಂದು ವಿವಾದಾತ್ಮಕ ಆದೇಶ ಹೊರಡಿಸಿರುವುದು ಒಡಿಶಾದ ವೀರ ಸುರೇಂದ್ರ ಸಾಯಿ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕಾಲೇಜು.

ಈ ಕಾಲೇಜಿನ ಹಾಸ್ಟೆಲ್ ಕ್ಯಾಂಪಸ್ ನಲ್ಲಿ ಇಂತಹದ್ದೊಂದು ಆದೇಶ ಹೊರಡಿಸಲಾಗಿದೆ. ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್‍ ಸುತ್ತಮುತ್ತ ಬೀದಿಬದಿಯಲ್ಲೂ ಹುಡುಗರ ಜತೆ ಹುಡುಗಿಯರು ಮಾತನಾಡುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ವಿದ್ಯಾರ್ಥಿನಿಯರ ಸುರಕ್ಷತೆ ದೃಷ್ಟಿಯಿಂದ ಈ ಆದೇಶ ನೀಡಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ತಕ್ಕ ಶಿಕ್ಷೆಗೆ ಗುರಿಯಾಗಬೇಕಾದೀತು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಅಗಸ್ಟಾ ವೆಸ್ಟ್ ಲ್ಯಾಂಡ್ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಬಾಯಿಂದ ಹೊರ ಬೀಳಲಿದೆ ಭಯಾನಕ ಸತ್ಯಗಳು ಎಂದ ಪ್ರಧಾನಿ ಮೋದಿ