Select Your Language

Notifications

webdunia
webdunia
webdunia
webdunia

ವಿವಾಹಿತ ಮಹಿಳಾ ಪೊಲೀಸ್ ಮೇಲೆ ಪೊಲೀಸ್ ಪೇದೆಯಿಂದ ನಿರಂತರ ಅತ್ಯಾಚಾರ

ವಿವಾಹಿತ ಮಹಿಳಾ ಪೊಲೀಸ್ ಮೇಲೆ ಪೊಲೀಸ್ ಪೇದೆಯಿಂದ ನಿರಂತರ ಅತ್ಯಾಚಾರ
ಲಕ್ನೋ , ಬುಧವಾರ, 2 ಜನವರಿ 2019 (07:03 IST)
ಲಕ್ನೋ : ಪೊಲೀಸ್ ಪೇದೆಯೊಬ್ಬ ವಿವಾಹಿತ ಮಹಿಳಾ ಪೊಲೀಸ್ ಪೇದೆಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಹಾಲಿನ ಜೊತೆ ಡ್ರಗ್ಸ್ ಮಿಕ್ಸ್ ಮಾಡಿ ಕುಡಿಸಿ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಘಟನೆ ಉತ್ತರ ಪ್ರದೇಶದ ಮುಜಾಪುರನಗರದಲ್ಲಿ ನಡೆದಿದೆ.


 ಮಹಿಳಾ ಪೊಲೀಸ್ ಪೇದೆಗೆ  2009ರಲ್ಲಿ ಮದುವೆಯಾಗಿದ್ದು, ಆದರೆ ಭಿನ್ನಾಭಿಪ್ರಾಯಗಳಿಂದ ಆಕೆ ಪತಿಯಿಂದ ದೂರ ವಾಸಿಸುತ್ತಿದ್ದಳು. ಈ ನೆಪದಲ್ಲಿ ಪೊಲೀಸ್ ಪೇದೆ ಕೇಶವ್ ಶರ್ಮಾ ಎಂಬಾತ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಹಾಲಿನ ಜೊತೆ ಡ್ರಗ್ಸ್ ಮಿಕ್ಸ್ ಮಾಡಿ ಕುಡಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈ ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ. ಆದರೆ ನಂತರ ಆತ ಮದುವೆ ಮಾಡಿಕೊಳ್ಳಲು ನಿರಾಕರಿಸಿ, ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾನೆ.


ಇದರಿಂದ ನೊಂದ ಮಹಿಳಾ ಪೊಲೀಸ್ ಪೇದೆ ಪೊಲೀಸ್ ಠಾಣಿಯಲ್ಲಿ ದೂರು ದಾಖಲಿಸಿದ್ದು, ಒಂದು ವೇಳೆ ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾಳೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೇಶವ್ ಶರ್ಮಾ ಅವರನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಅಮಾನತು ಮಾಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವುಗಳನ್ನು ಆರಾಧಿಸುವವರು ಮೂರ್ಖರು- ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ