ಅಪ್ಪ-ಅಮ್ಮನ ಅಜಾಗರೂಕತೆಗೆ ಕಾರ್ ನೊಳಗೆ ಲಾಕ್ ಆದ ಮಗು

ಗುರುವಾರ, 8 ನವೆಂಬರ್ 2018 (07:39 IST)
ಮೀರತ್: ಅಪ್ಪ-ಅಮ್ಮನ ಅಜಾಗರೂಕತೆಯಿಂದಾಗಿ ಮಗುವೊಂದು ಕಾರೊಳಗೇ ಲಾಕ್ ಆಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಮೀರತ್ ನ ಮಾಲ್ ಒಂದರ ಎದುರು ನಡೆದಿದೆ.

ಮೀರತ್ ನ ಸೆಂಟ್ರಲ್ ಮಾರ್ಕೆಟ್ ಎದುರುಗಡೆ ನಿಲ್ಲಿಸಿದ್ದ ಕಾರ್ ನೊಳಗೆ ಬಂಧಿಯಾಗಿದ್ದ ಮಗುವನ್ನು ನೋಡಿದ ಸ್ಥಳೀಯರು ಕಾರಿನ ಗಾಜು ಒಡೆದು ಹೆಣ್ಣು ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ಕಾರಿನೊಳಗೇ ಬಿಟ್ಟು ಹೆತ್ತವರು ಶಾಪಿಂಗ್ ಗೆ ತೆರಳಿದ್ದರು.

ಮಗುವನ್ನು ರಕ್ಷಿಸಿದ ಬಳಿಕ ಪೋಷಕರನ್ನು ಪತ್ತೆ ಹಚ್ಚಿದ ಪೊಲೀಸರು ಇಂತಹ ಕೃತ್ಯ ಮತ್ತೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಗ್ರೀನ್ ಪಟಾಕಿ ಹೊಡೆಯಿರಿ ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಈ ವರ್ತಕರ ಪ್ರತಿಭಟನೆ ಹೇಗಿತ್ತು ಗೊತ್ತಾ?!