Select Your Language

Notifications

webdunia
webdunia
webdunia
webdunia

ಜೈಲಿನಿಂದ ಬಿಡುಗಡೆಯಾದ ಸಂಜಯ್ ದತ್

ಜೈಲಿನಿಂದ ಬಿಡುಗಡೆಯಾದ ಸಂಜಯ್ ದತ್
ಪುಣೆ , ಗುರುವಾರ, 25 ಫೆಬ್ರವರಿ 2016 (09:26 IST)
ಬಾಲಿವುಡ್‌ ಸ್ಟಾರ್ ಸಂಜಯ್‌ ದತ್‌ ಸೆರೆವಾಸ ಇಂದಿಗೆ ಕೊನೆಗೊಂಡಿದೆ. ಗುರುವಾರ ಮುಂಜಾನೆ ಮುನ್ನಾಭಾಯ್ ಪುಣೆಯ ಯರವಾಡಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲುವಾಸವನ್ನು ಸಾಮಾನ್ಯ ಕೈದಿಯಂತೆ ಕಳೆದಿದ್ದ ಅವರು ಅಲ್ಲಿ ಪೇಪರ್ ಬ್ಯಾಗ್ ಸಹ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. 
 
ತಮ್ಮ ಕೆಲವು ಕಾಗದ ಪತ್ರಗಳ ಫೈಲ್ ಮತ್ತು ಬ್ಯಾಗ್‌ನೊಂದಿಗೆ ಜೈಲಿನಿಂದ ಹೊರ ಬಂದ್ ದತ್ ಒಂದು ಕ್ಷಣ ಭಾವುಕರಾದರು. ಜೈಲಿನ ನೆಲ ಮುಟ್ಟಿ ನಮಸ್ಕರಿಸಿದ ಅವರು ಜೈಲಿಗೆ ಒಂದು ಸೆಲ್ಯೂಟ್ ಹೊಡೆದರು. 
 
ಪತ್ನಿ ಮಾನ್ಯತಾ ದತ್ ಭಾವುಕರಾಗಿ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಾಲಿವುಡ್ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಸಹ ಹಾಜರಿದ್ದರು. 
 
1993, ಮಾರ್ಚ್ 12ರಂದು ನಡೆದ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಮುನ್ನಾಭಾಯ್ ಜೈಲು ಸೇರಿದ್ದರು. 
 
ನ್ಯಾಯಾಲಯ 42 ತಿಂಗಳ ಅಂದರೆ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ವಿಚಾರಣಾಧೀನ ಕೈದಿಯಾಗಿ ಅವರು 18 ತಿಂಗಳು ಜೈಲುವಾಸ ಅನುಭವಿಸಿದ್ದರು. ಮೊದಲೇ 18 ತಿಂಗಳು ಜೈಲಿನಲ್ಲಿ ಕಳೆದಿದ್ದರಿಂದ 42 ತಿಂಗಳು ಶಿಕ್ಷೆ ಅನುಭವಿಸಬೇಕಿತ್ತು. ಆದರೆ, ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯಪಾಲರ ಶಿಕ್ಷೆ ಕಡಿತದ ನಿರ್ಧಾರದಿಂದಾಗಿ ಸನ್ನಡತೆಯ ಆಧಾರದ ಮೇಲೆ ಅವರು ಅವಧಿ ಮೊದಲೇ ಬಿಡುಗಡೆಯಾಗುತ್ತಿದ್ದಾರೆ. 
 
ದತ್ ಅವರು 42 ತಿಂಗಳ ಪೈಕಿ 33 ತಿಂಗಳು 25 ದಿನ ಶಿಕ್ಷೆ ಅನುಭವಿಸದಂತಾಗುತ್ತದೆ. ಈ ಅವಧಿಯಲ್ಲಿ ತಲಾ ಎರಡು ಬಾರಿ ಪೆರೋಲ್‌ ಹಾಗೂ ಫರ್ಲೋ ರಜೆ ಮೇಲೆ ದತ್‌ ಅವರು ಜೈಲಿನಿಂದ ಹೊರಗಿದ್ದರು.
 
ಈಗ ನೇರವಾಗಿ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿಲಿರುವ ನಟ ಬಳಿಕ ತಾಯಿ ನರ್ಗೀಸ್ ಸಮಾಧಿಗೆ ತೆರಳಲಿದ್ದಾರೆ. 
 
ದತ್ ಬಿಡುಗಡೆ ವಿರೋಧಿಸಿ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಭಾಲೇಕಾರ್ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಸಾರ್ವಜನಿಕ ಹಿತಾಸಕ್ತಿ ಮೇರೆಗೆ ದತ್ ಬಿಡುಗಡೆ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Share this Story:

Follow Webdunia kannada