Select Your Language

Notifications

webdunia
webdunia
webdunia
webdunia

ಕೇಂದ್ರದಿಂದ ಮಹಿಳೆಯರಿಗೆ ಮಹತ್ತರವಾದ ಕೊಡುಗೆ; ಕಡಿಮೆ ದರದಲ್ಲಿ ‘ಸುವಿಧಾ’ ಸ್ಯಾನಿಟರಿ ಪ್ಯಾಡ್

ಕೇಂದ್ರದಿಂದ ಮಹಿಳೆಯರಿಗೆ ಮಹತ್ತರವಾದ ಕೊಡುಗೆ;  ಕಡಿಮೆ ದರದಲ್ಲಿ ‘ಸುವಿಧಾ’ ಸ್ಯಾನಿಟರಿ ಪ್ಯಾಡ್
ನವದೆಹಲಿ , ಶುಕ್ರವಾರ, 9 ಮಾರ್ಚ್ 2018 (07:26 IST)
ನವದೆಹಲಿ : ಈ ಹಿಂದೆ ಸ್ಯಾನಿಟರಿ ಪ್ಯಾಡ್ ಗಳ ಮೇಲೆ ಅಧಿಕ ಜಿಎಸ್ಟಿ ವಿಧಿಸಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಕೇವಲ 2.50 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಒದಗಿಸುವುದರ ಮೂಲಕ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹತ್ತರವಾದ ಕೊಡುಗೆಯನ್ನು ನೀಡಿದೆ.


ಮಣ್ಣಿನಲ್ಲಿ ಕರಗುವ ಈ 'ಸುವಿಧಾ' ನ್ಯಾಪ್ಕಿನ್‌ಗಳನ್ನು ವಿಶ್ವ ಋುತುಸ್ರಾವ ಆರೋಗ್ಯ ದಿನವಾಗಿರುವ ಮೇ 28ರಿಂದ ದೇಶದ 3200 ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತದೆ.


ಗುರುವಾರ ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಅವರು ಹೊಸ ಸ್ಯಾನಿಟರಿ ನ್ಯಾಪ್ಕಿನ್‌ ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ‘ಭಾರತೀಯ ಜನೌಷಧ ಪರಿಯೋಜನೆಯಡಿ ಪೂರೈಸುವ ಇದು ಶೇಕಡಾ 100ರಷ್ಟು ಆಕ್ಸೊ ಬಯೊ ಡಿಗ್ರೇಡೆಬಲ್‌ ಆಗಿರುವುದರಿಂದ ಪರಿಸರಕ್ಕೂ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ. ದೇಶದ ಸೌಲಭ್ಯವಂಚಿತ ಮಹಿಳೆಯರ ಸ್ವಚ್ಛತೆ, ಆರೋಗ್ಯ ಮತ್ತು ಸೌಖ್ಯದ ದೃಷ್ಟಿಯಿಂದ ಯೋಜನೆ ಜಾರಿ ಮಾಡಲಾಗುತ್ತಿದ್ದು, ಎಲ್ಲರಿಗೂ ಕೈಗೆಟಕುವ ಮತ್ತು ಗುಣಮಟ್ಟದ ಆರೋಗ್ಯ ಒದಗಿಸುವ ಪ್ರಧಾನಿ ಮೋದಿ ಕನಸಿನ ಭಾಗವಿದು ಎಂದು ಅನಂತಕುಮಾರ್‌ ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಟ್ಝ್‌ಕರ್‌ ಆರ್ಕಿಟೆಕ್ಚರ್‌ ಪ್ರಶಸ್ತಿಗೆ ಭಾಜನರಾದ ಬಾಲಕೃಷ್ಣ ದೋಷಿ