Select Your Language

Notifications

webdunia
webdunia
webdunia
webdunia

16 ವರ್ಷದ ಬಾಲಕಿಯ ಮೇಲೆ ಮಲತಂದೆ ಹಾಗೂ ಆತನ ಸಹೋದರನಿಂದ ಸಾಮೂಹಿಕ ಅತ್ಯಾಚಾರ

16 ವರ್ಷದ ಬಾಲಕಿಯ ಮೇಲೆ ಮಲತಂದೆ ಹಾಗೂ ಆತನ  ಸಹೋದರನಿಂದ ಸಾಮೂಹಿಕ ಅತ್ಯಾಚಾರ
ಲಕ್ನೋ , ಸೋಮವಾರ, 7 ಜನವರಿ 2019 (07:11 IST)
ಲಕ್ನೋ : 16 ವರ್ಷದ ಬಾಲಕಿಯ ಮೇಲೆ ಮಲತಂದೆ ಹಾಗೂ ಆತನ ಸಹೋದರ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಂಧ್ಲಾ ಪಟ್ಟಣದಲ್ಲಿ ನಡೆದಿದೆ.

ಕಂಧ್ಲಾ ನಿವಾಸಿಗಳಾದ ವಾಸೀಮ್ ಹಾಗೂ ತನ್ವೀರ್ ಅತ್ಯಾಚಾರ ಎಸಗಿದ ಆರೋಪಿಗಳು. ಸಂತ್ರಸ್ತ ಬಾಲಕಿಯ ತಂದೆ 2018ರ ಅಕ್ಟೋಬರ್ ನಲ್ಲಿ ನಿಧರಾಗಿದ್ದ ಕಾರಣ ತಾಯಿ ವಾಸೀಮ್ ಜೊತೆಗೆ ಮದುವೆಯಾಗಿದ್ದು ತನ್ನ 16 ವರ್ಷದ ಮಗಳನ್ನು ತನ್ನ ಬಳಿ ಇರಿಸಿಕೊಂಡಿದ್ದಳು.

 

ಆದರೆ ನೀಚ ಮಲತಂದೆ ತಾಯಿ ಇಲ್ಲದ ವೇಳೆ ತನ್ನ ಸೋದರ ತನ್ವೀರ್ ಜೊತೆ ಸೇರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಅದನ್ನು ವಿಡಿಯೋ ಮಾಡಿ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ.

 

ಈ ವಿಚಾರ ತಿಳಿದ ತಾಯಿ ಸ್ಥಳೀಯ ಪೊಲೀಸ್ ಠಾಣೆಗೆ ಭಾನುವಾರ ದೂರು ನೀಡಿದ್ದಾಳೆ. ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಜನವರಿ 8 ಮತ್ತು 9 ರಂದು ಭಾರತ್ ಬಂದ್‍