Select Your Language

Notifications

webdunia
webdunia
webdunia
webdunia

ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಕ್ಷಣಗಣನೆ....

ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ  ಕ್ಷಣಗಣನೆ....
ಬೆಂಗಳೂರು , ಸೋಮವಾರ, 29 ಸೆಪ್ಟಂಬರ್ 2008 (21:12 IST)
NRB
ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಗಳಿಸಿದ ಮೈಸೂರು ವಿದ್ಯುದ್ದೀಪಾಲಂಕಾರಗಳಿಂದ ನವವಧುವಿನಂತೆ ಸಿಂಗಾರಗೊಳ್ಳುವ ಮೂಲಕ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಮಂಗಳವಾರ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ.

ಕನ್ನಡಿಗರ ನಾಡಹಬ್ಬಕ್ಕೆ ಮಂಗಳವಾರ ಬೆಳಿಗ್ಗೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿ ಅವರು ಚಾಮುಂಡಿಬೆಟ್ಟದಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.

ಮಂಗಳವಾರದಿಂದ ಆರಂಭಗೊಳ್ಳಲಿರುವ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಮೈಸೂರಿನಲ್ಲಿ ಜಮಾಯಿಸಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ,ಕುಸ್ತಿ ಪಂದ್ಯಗಳಿಗೆ ಮಂಗಳವಾರ ಚಾಲನೆ ದೊರೆಯಲಿದೆ.

ಮೈಸೂರು ಅರಮನೆ ವಿದ್ಯುದ್ದೀಪಗಳಿಂದ ಅಲಂಕಾರಗೊಂಡಿದ್ದು,ಲಕ್ಷಾಂತರ ಪ್ರವಾಸಿಗರ ಕಣ್ಣನ ಸೆಳೆಯುತ್ತಿದೆ.ನಾಡಹಬ್ಬಕ್ಕಾಗಿ ಮೈಸೂರಿನ ಬೀದಿ,ಬೀದಿ ತಳಿರು-ತೋರಣಗಳಿಂದ ಶೃಂಗಾರಗೊಂಡಿದೆ.
webdunia
NRB


ದಸರಾಕ್ಕೆ ಉಗ್ರರ ಕರಿನೆರಳು: ನಾಡಹಬ್ಬ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಉಗ್ರರ ಭಯ ಕೂಡ ಸ್ಥಳೀಯರನ್ನು ಕಾಡತೊಡಗಿದೆ. ದೇಶಾದ್ಯಂತ ಸರಣಿಯೋಪಾದಿಯಲ್ಲಿ ಸಂಭವಿಸುತ್ತಿರುವ ಬಾಂಬ್ ಸ್ಫೋಟ ಘಟನೆಯಿಂದಾಗಿ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ.

ಆ ನಿಟ್ಟಿನಲ್ಲಿ ಜಿಲ್ಲೆಯ ಜನರು ಯಾರೇ ಅನುಮಾನಿತ ವ್ಯಕ್ತಿಗಳು,ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಬಿಗಿ ಬಂದೋಬಸ್ತ್-ಎಲ್ಲೆಡೆ ಕ್ಯಾಮರಾ ಕಣ್ಣು:
webdunia
NRB


ಮೈಸೂರು ಅರಮನೆಗೆ ಸ್ಫೋಟ ಬೆದರಿಕೆಯ ಹಿನ್ನೆಲೆಯಲ್ಲಿ ಸುಮಾರು 2ಕೋಟಿ ಅರವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಹೈದರಾಬಾದ್‌ನಿಂದ ಭದ್ರತಾ ವ್ಯವಸ್ಥೆಗಾಗಿ ಕಂಟ್ರೋಲ್ ರೂಂ ನಿರ್ಮಿಸಲಾಗಿದೆ.

ಸುಮಾರು 15ಸಿಸಿ ಟಿವಿ, ಮುಖ್ಯದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ,ಈ ಕಂಟ್ರೋಲ್ ರೂಂ 24ಗಂಟೆಯೂ ಕಾರ್ಯಾಚರಿಸುತ್ತಿರುವುದಾಗಿ ತಿಳಿಸಿದ ಅವರು,ಅರಮನೆಯೊಳಗೆ ಬರುವ ಹಾಗೂ ವಾಹನಗಳ ಸೇರಿದಂತೆ ಪ್ರತಿಯೊಂದು ಚಲನ-ವಲನಗಳು ಇದರಲ್ಲಿ ದಾಖಲಾಗಲಿದೆ.

Share this Story:

Follow Webdunia kannada