Select Your Language

Notifications

webdunia
webdunia
webdunia
webdunia

ಕಲಿಯುಗದ ಅಂತ್ಯವನ್ನು ಹೇಳುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ...!

ಕಲಿಯುಗದ ಅಂತ್ಯವನ್ನು ಹೇಳುತ್ತೆ ಈ ದೇವಾಲಯ ಎಲ್ಲಿದೆ ಗೊತ್ತಾ...!
ಬೆಂಗಳೂರು , ಮಂಗಳವಾರ, 19 ಜೂನ್ 2018 (14:24 IST)
ಜಗತ್ತಿನ ಆದಿ-ಅಂತ್ಯ ಇದು ಶತಮಾನಗಳಿಂದ ನಮ್ಮ ಪುರಾಣದಲ್ಲಿ ಕಂಡುಬರುವ ಪದ. ಇಂದು ನಾವೆಲ್ಲರೂ ಕಲಿಯುಗದಲ್ಲಿ ಇದ್ದೇವೆ, ಅದಕ್ಕೂ ಪೂರ್ವದಲ್ಲಿ ನಾವು 3 ಯುಗಗಳನ್ನು ಕಳೆದಿದ್ದೇವೆ ಎಂಬುದಕ್ಕೆ ವೇದಗಳು, ಪುರಾಣಗಳು ನಮ್ಮ ಮುಂದೆ ಸಾಕ್ಷಿಯಾಗಿ ನಿಲ್ಲುತ್ತವೆ,

ಅದರಲ್ಲೂ ನಮ್ಮ ಹಿಂದಿನ ಯುಗಗಳು ಹೇಗೆ ಅಂತ್ಯ ಕಂಡವು ಆ ಅಂತ್ಯಕ್ಕೆ ಕಾರಣಳೇನು ಎಂಬುದನ್ನು ನಾವು ಸುಲಭವಾಗಿ ನಮ್ಮ ವೇದಗಳ ಮೂಲಕ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ, ಈ ಕಲಿಯುಗಕ್ಕೂ ಒಂದು ಅಂತ್ಯವಿದೆ ಎಂದು ಹೇಳಿದರೆ ನಿಮಗೆ ಹಾಸ್ಯ ಎನಿಸಬಹುದು ಕೆಲವೊಮ್ಮೆ ಕೆಲ ವಿಷಯಗಳು ಹಾಸ್ಯಾಸ್ಪದವಾಗಿ ಕಂಡರು ವಾಸ್ತವಕ್ಕೆ ಮತ್ತು ಕೆಲ ವಿಷಯಕ್ಕೆ ಅದರದ್ದೇ ಆದ ಹಿನ್ನೆಲೆ ಇರುತ್ತದೆ.
webdunia
ಪೂರ್ವ ಕಾಲಗಳಲ್ಲಿ ಜಗತ್ತಿನ ಆಗುಹೋಗುಗಳನ್ನು ತತ್‌ಕ್ಷಣದಲ್ಲಿ ಹೇಳುವ ಜ್ಞಾನವನ್ನು ಕೆಲವು ಮಹಿಮಾನ್ವಿತರು ತಮ್ಮ ತಪಸ್ಸು ಶಕ್ತಿಯಿಂದ ಆ ಶಕ್ತಿಯನ್ನು ಪಡೆದುಕೊಂಡಿರುವುದನ್ನು ನಾವು ಪುರಾಣಗಳಲ್ಲಿ ಕಾಣುತ್ತೇವೆ. ಅಷ್ಟೇ ಅಲ್ಲ ದಕ್ಷಿಣ ಭಾರತದ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಯವರು ಸಹ ತಮ್ಮ ಕಾಲಜ್ಞಾನದಲ್ಲಿ ಕಲಿಯುಗದ ಅಂತ್ಯದ ಕುರಿತು ಕೆಲವು ಸಂಗತಿಗಳನ್ನು ಬರೆದಿದ್ದರು, ಅದು ಈಗ ಸತ್ಯವಾಗುತ್ತಿದೆ. ಎಲ್ಲಿ ಹೇಗೆ ಅಂತೀರಾ ಈ ವರದಿಯನ್ನು ಓದಿ.
 
ಆಂಧ್ರಪ್ರದೇಶದ ಕರ್ನೂಲ್‍ನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಕ್ಷೇತ್ರವಾದ ಯಾಗಂಟಿ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವ ಸ್ಥಳವಾಗಿದೆ. ಅದಕ್ಕೆ ಕಾರಣ ಇಲ್ಲಿ ನೆಲೆನಿಂತಿರುವ ಕಲ್ಲಿನ ಬಸವ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು. ಅಷ್ಟಕ್ಕೂ ಈ ಕಲ್ಲಿನ ಬಸವನಿಗೂ ಯಾಗಂಟಿಗೂ ಎತ್ತಲಿಂದ ಎತ್ತ ಸಂಬಂಧ ಅಂತೀರಾ ಸಂಬಂಧ ಇದೆ ಅನ್ನುತ್ತೆ ಕಾಲಜ್ಞಾನ.
 
ಸ್ಥಳಪುರಾಣ
 
ಪುರಾಣಗಳ ಪ್ರಕಾರ ಅಗಸ್ತ್ಯ ಮಹಾಮುನಿಗಳು ಪೂರ್ವದಲ್ಲಿ ಈ ಪ್ರದೇಶದಲ್ಲಿ ವಾಸವಿದ್ದರಂತೆ ಅವರು ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ಆಸೆಪಟ್ಟಿದ್ದರಂತೆ ಅದೇ ಪ್ರಕಾರವಾಗಿ ದೇವಾಲಯದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಆ ದೇವಾಲಯಕ್ಕೆ ಸ್ವತಃ ತಮ್ಮ ಕೈಯಾರೆ ಮೂಲ ವಿಗ್ರಹವನ್ನು ಕೆತ್ತಬೇಕು ಎನ್ನುವುದು ಮುನಿಗಳು ಸಂಕಲ್ಪಿಸಿಕೊಂಡಿದ್ದರು. ಅದೇ ಪ್ರಕಾರವಾಗಿ ಮೂರ್ತಿ ಕೆತ್ತನೆ ಕಾರ್ಯವನ್ನು ಪ್ರಾರಂಭಿಸಿದರು. ಆದರೆ ಮೂರ್ತಿ ಕೆತ್ತನೆ ವೇಳೆ ಮುನಿಯ ಕೈ ಬೆರಳಿಗೆ ಗಾಯವಾಯಿತು. ಹಾಗಾಗಿ ತಾವು ಮಾಡಿದ ಸಂಕಲ್ಪದಲ್ಲಿ ಏನೋ ಲೋಪವಿರಬಹುದು ಎಂದು ಅರಿತ ಮುನಿ ವೆಂಕಟೇಶ್ವರ ಸ್ವಾಮಿಯ ವಿಗ್ರಹ ಕೆತ್ತನೆ ಮಾಡುವುದನ್ನು ನಿಲ್ಲಿಸಿದರು ಅಷ್ಟೇ ಅಲ್ಲ ಆ ಸಮಯದಲ್ಲಿ ದೇವಸ್ಥಾನದ ನಿರ್ಮಾಣ ಸಹಿತ ಪೂರ್ಣವಾಗಿರಲಿಲ್ಲ ಹಾಗಾಗಿ ಬೇರೊಂದು ಮೂರ್ತಿಯನ್ನು ಪ್ರತಿಷ್ಟಾಪಿಸಲು ಈ ದೇವಾಲಯದ ಸ್ವಲ್ಪವೇ ದೂರದಲ್ಲಿರುವ ಸ್ವಯಂ ಪ್ರತಿಷ್ಠಾಪನೆಗೊಂಡಿದ್ದ ಉಮಾಮಹೇಶ್ವರ ಸ್ವಾಮಿ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿರುವುದಾಗಿ ಹೇಳಲಾಗುತ್ತಿದೆ. ಅಷ್ಟೇ ಅಲ್ಲ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಆ ದೇವಾಲಯದಲ್ಲಿನ ಒಂದು ಗುಹೆಯಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಇಂದಿಗೂ ಸಹ ಈ ಪರ್ವತದ ಗುಹೆಯಲ್ಲಿ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ನಾವು ಕಾಣಬಹುದಾಗಿದೆ. 
webdunia
ಈ ದೇವಸ್ಥಾನವು ನೋಡಲು ತುಂಬಾ ಆಕರ್ಷಕವಾಗಿದ್ದು ಇಲ್ಲಿನ ಪುಷ್ಕರಣಿ ಮತ್ತು ನಂದಿ ಇಲ್ಲಿನ ವಿಶೇಷ ಕೇಂದ್ರ ಬಿಂದು ಎಂದೇ ಹೇಳಬಹುದು. ಅಷ್ಟೇ ಅಲ್ಲ ಇಲ್ಲಿನ ಪುಷ್ಟರಣಿಯು ಹಲವು ರೋಗಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಈ ಪುಷ್ಕರಣಿಯ ನೀರು ನಂದಿಯ ಬಾಯಿಂದ ಬರುತ್ತದೆ ಮತ್ತು ಈ ಪುಷ್ಕರಣಿಯಲ್ಲಿ ಅಗಸ್ತ್ಯ ಮಹಾ ಮುನಿಯು ಸ್ನಾನ ಮಾಡುತ್ತಿದ್ದರಂತೆ. ಹಾಗಾಗಿ ಈ ಪುಷ್ಕರಣಿಗೆ ಅಗಸ್ತ್ಯ ಪುಷ್ಕರಣಿ ಎಂಬ ಹೆಸರು ಪ್ರಚಲಿತದಲ್ಲಿದೆ. ಈ ಪುಷ್ಕರಣಿಯಲ್ಲಿ ಇನ್ನೊಂದು ವಿಶೇಷವಿದೆ ಅದೇನೆಂದರೆ ವರ್ಷದ ಎಲ್ಲಾ ಕಾಲವೂ ಇಲ್ಲಿನ ಪುಷ್ಕರಣಿಯಲ್ಲಿರುವ ನೀರಿನ ಮಟ್ಟ ಬದಲಾಗುವುದಿಲ್ಲ ವರ್ಷಪೂರ್ತಿ ಇದು ಒಂದೇ ವಿಧವಾಗಿ ಇರುವುದನ್ನು ನಾವು ಕಾಣಬಹುದಾಗಿದೆ.
 
ಅಚ್ಚರಿ ಬಸವಣ್ಣ
 
ಈ ದೇವಸ್ಥಾನದಲ್ಲಿ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಅದು ಬಸವಣ್ಣನ ಪ್ರತಿಮೆ. ಹೌದು, ಈ ದೇವಾಲಯವನ್ನು ನಿರ್ಮಾಣ ಮಾಡಿದ ಕೆಲವು ದಿನಗಳಲ್ಲೇ ದೇವಾಲಯದ ಪ್ರಧಾನ ಮುಖ ಮಂಟಪದ ಈಶಾನ್ಯ ದಿಕ್ಕಿನಲ್ಲಿ ನಂದೀಶ್ವರನು ಸ್ವಯಂಭೂವಾಗಿ ನೆಲೆಸಿದನು ಎಂದು ಹೇಳಲಾಗುತ್ತಿದೆ. ಈ ಬೃಹದಾಕಾರವಾಗಿರುವ ಬಸವಣ್ಣನ ವಿಗ್ರಹವು ಕಾಲಜ್ಞಾನದಲ್ಲಿ ಹೇಳಿರುವಂತೆ ಈ ಸ್ಥಳದಲ್ಲಿ ಹಲವು ಅಚ್ಚರಿಗಳನ್ನು ಉಂಟುಮಾಡುತ್ತಿದೆ. ಸ್ವಯಂಭೂವಾಗಿ ಉದ್ಭವಿಸಿರುವ ಈ ಬಸವಣ್ಣ 90 ವರ್ಷಗಳ ಹಿಂದೆ ಚಿಕ್ಕದಾಗಿತ್ತು ಎನ್ನಲಾಗುತ್ತಿದೆ, ಇಂದು ಅದು ಬೃಹದಾಕಾರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ಕಲ್ಲಿನ ಬಸವ ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವೇನು ಎಂಬುದು ಮಾತ್ರ ಇಂದಿಗೂ ನಿಗೂಢವಾಗಿದೆ ಕಾಲಜ್ಞಾನದಲ್ಲಿ ಹೇಳಿರುವ ಪ್ರಕಾರ ಕಲಿಯುಗ ಅಂತ್ಯವಾಗುವ ಹೊತ್ತಿಗೆ ಈ ಕಲ್ಲಿನ ಬಸವ ಎದ್ದು ನಿಂದು ಘೋರವಾಗಿ ಕೂಗುತ್ತಾನೆ ಎನ್ನಲಾಗಿದೆ ಆ ಪ್ರಕಾರವಾಗಿ ಈ ಕಲ್ಲಿನ ಬಸವ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದನ್ನು ನೋಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ಕಲಿಯುಗ ಅಂತ್ಯವಾಗುವುದೇ ಎಂಬ ಅನುಮಾನ ಎಲ್ಲೆಡೆ ಮೂಡುತ್ತಿರುವುದು ಸುಳ್ಳಲ್ಲ.
 
ಕಲಿಯುಗದಲ್ಲಿ ಏನಾಗಲಿದೆ
 
ಕಲ್ಲಿನ ಬಸವ ಕೂಗಿದ ನಂತರ ಜಗತ್ತಿನ ಸಮಸ್ತ ಪಶು ಪ್ರಾಣಿ ಮನುಷ್ಯರು ಎಲ್ಲರೂ ಸಾಯುತ್ತಾರಂತೆ, ಅಷ್ಟೇ ಅಲ್ಲ ಪುಣ್ಯಮಾಡಿರುವ ಕೆಲವರು ಮಾತ್ರ ಉಳಿದುಕೊಳ್ಳುತ್ತಾರೆ ಅವರ ಮೂಲಕ ಮತ್ತೆ ಹೊಸ ಪೀಳಿಗೆ ಹೊಸ ಕಾಲ ಸೃಷ್ಟಿಯಾಗಲಿದೆ ಎಂದು ವೀರಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನದಲ್ಲಿ ವಿವರಿಸಿದ್ದಾರೆ.
 
ಭೇಟಿಯ ಸಮಯ
 
ಈ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ನೀವು ಅಂದುಕೊಂಡರೆ ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಮತ್ತು ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದೇವಾಲಯಕ್ಕೆ ತೆರಳಲು ಸೂಕ್ತ ಸಮಯವಾಗಿದೆ
 
ಈ ದೇವಾಲಯ ದಾರಿ
 
ಈ ಪ್ರಸಿದ್ಧ ದೇವಾಲಯವು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಿಂದ ಸುಮಾರು 88 ಕಿಮೀ ದೂರದಲ್ಲಿರುವ ವೀರಭ್ರಮ್ಮೇಂದ್ರ ಸ್ವಾಮಿ ನಿವಾಸದ ಬನಗಾನಪಲ್ಲಿಯಲ್ಲಿಂದ ಸುಮಾರು 12 ಕಿಮೀ ದೂರದಲ್ಲಿರುವ ನಂದಮಲ್ಲ ಅರಣ್ಯ ಪ್ರದೇಶದಲ್ಲಿ ನಾವು ಈ ದೇವಾಲಯವನ್ನು ಕಾಣಬಹುದು. ಅಷ್ಟೇ ಅಲ್ಲ ಈ ದೇವಾಲಯಕ್ಕೆ ಪ್ರಯಾಣಿಸಲು ಸಾಕಷ್ಟು ಬಸ್ಸಿನ ಸೌಕರ್ಯಗಳು ಲಭ್ಯವಿದೆ.
 
ಒಟ್ಟಿನಲ್ಲಿ ಇಂದಿನ ಕಾಲದಲ್ಲೂ ಇಂತಹ ಹಲವು ಅಚ್ಚರಿಗಳು ನಮ್ಮ ಕಣ್ಣ ಮುಂದೆ ನಾವು ಕಾಣುತ್ತಿದ್ದೇವೆ ಅದರಲ್ಲೂ ಹಲವು ವರ್ಷಗಳ ಹಿಂದೆ ಹೇಳಿದ ಕಾಲಜ್ಞಾನ ಇಂದು ನಮ್ಮ ಕಣ್ಣ ಮುಂದೆ ಸತ್ಯಾಸತ್ಯತೆಯ ನೈಜತೆಯನ್ನು ಪ್ರದರ್ಶಿಸುತ್ತಿದೆ ಅಂದರೆ ಯಾವುದೇ ಕಾಣದ ಶಕ್ತಿ ನಮ್ಮ ಮುಂದೆ ಹೆಮ್ಮರವಾಗಿದೆ ಎಂಬುದು ಇಲ್ಲಿ ನಮಗೆ ಅರ್ಥವಾಗುತ್ತದೆ. ಒಮ್ಮೆಯಾದರೂ ಈ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ನೀವು ಪುನೀತರಾಗಿ.

Share this Story:

Follow Webdunia kannada

ಮುಂದಿನ ಸುದ್ದಿ

ರಂಗಭೂಮಿಯೆಡೆಗಿನ ಪ್ರೀತಿ ಬೆಂಗಳೂರಿನಲ್ಲಿ ಕಂಡುಕೊಂಡೆ: ಶ್ರದ್ಧಾ ಶ್ರೀನಾಥ್