Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಟ್ಟ ಶಾಸಕ ರೋಷನ್ ಬೇಗ್

ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಟ್ಟ ಶಾಸಕ ರೋಷನ್ ಬೇಗ್
ಬೆಂಗಳೂರು , ಮಂಗಳವಾರ, 25 ಸೆಪ್ಟಂಬರ್ 2018 (19:03 IST)
ಬೆಂಗಳೂರು : ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಕೈ ಕೊಟ್ಟು, ಮೆಕ್ಕಾಗೆ ಹೋಗುವುದರ ಮೂಲಕ ಕಾಂಗ್ರೆಸ್ ಗೆ ಬಿಗ್ ಶಾಕ್ ನೀಡಿದ್ದಾರೆ ಎನ್ನಲಾಗಿದೆ.


ರೋಷನ್ ಬೇಗ್ ಅವರು ಚುನಾವಣೆ ವೇಳೆಯಲ್ಲಿ ಮತದಾನದ ಮಾಡದೇ ಮೆಕ್ಕಾಗಿ ತೆರಳಿದ್ದಾರೆ. ಬಿಬಿಎಂಪಿ ಚುನಾವಣೆ ಮುಗಿದ ಬಳಿಕವಷ್ಟೆ ರೋಷನ್ ಬೇಗ್ ಅವರು ಮರಳಿ ಬರಲಿದ್ದಾರೆ ಎನ್ನಲಾಗುತ್ತಿದೆ.


 ಸಚಿವರ ಈ ನಡೆ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಚಿವ ಸ್ಥಾನ ಸಿಗದೇ ಹಿನ್ನಲೆಯಲ್ಲಿ ಕಾಂಗ್ರೆಸ್ ನ ಮೇಲೆ  ತಮ್ಮ ಸಿಟ್ಟನ್ನು ಈ ಮೂಲಕ ತೀರಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ವೇಳೆಯಲ್ಲಿ ಅವರು ಮೆಕ್ಕಾಗೆ ಹೋಗುವುದು ಎಷ್ಟರ ಮಟ್ಟಿಗೆ ಸರಿ ಎಂಬ ಕುರಿತು ಇದೀಗ, ಸ್ಥಳೀಯ ಜನ ಪ್ರತಿನಿಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಮಾಚಲ ಪ್ರದೇಶದಲ್ಲಿ 45 ಚಾರಣಿಗರು ನಾಪತ್ತೆ..!