ವಿಧಾನಸಭೆ ಸೋತ ಚೆಲುವರಾಯ ಸ್ವಾಮಿ ಲೋಕಸಭೆಗೆ ಸ್ಪರ್ಧಿಸುತ್ತಾರಾ?

ಭಾನುವಾರ, 27 ಮೇ 2018 (09:45 IST)
ಬೆಂಗಳೂರು: ಜೆಡಿಎಸ್ ನಿಂದ ಬಂಡಾಯವೆದ್ದು, ಕಾಂಗ್ರೆಸ್ ಪಕ್ಷ ಸೇರಿಕೊಂಡ ಮಾಜಿ ಶಾಸಕ ಚೆಲುವರಾಯ ಸ್ವಾಮಿ ಈ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.

ಆದರೆ ವಿಪರ್ಯಾಸ ನೋಡಿ ತಾವು ಹೊರ ಬಂದ ಪಕ್ಷದ ಜತೆಗೇ ತಾವು ಸೇರಿಕೊಂಡ ಪಕ್ಷ ಕೈ ಸೇರಿಸಿ ಸರ್ಕಾರ ರಚಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆಲುವರಾಯಸ್ವಾಮಿ ರಾಷ್ಟ್ರದ ಹಿತ ದೃಷ್ಟಿಯಿಂದ ಜೆಡಿಎಸ್ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆಯಷ್ಟೇ ಎಂದಿದ್ದಾರೆ.

ಅಷ್ಟೇ ಅಲ್ಲದೆ ತಮ್ಮ ಸೋಲಿಗೆ ಕಾರಣ ತಿಳಿಸಿರುವ ಅವರು ‘ಈ ಚುನಾವಣೆ ಜಾತಿ ಆಧಾರದಲ್ಲಿ ನಡೆದಿದೆ. ಅದಕ್ಕೇ ನನಗೆ ಸೋಲಾಯಿತು. ಮತದಾರರ ತೀರ್ಪಿಗೆ ತಲೆಬಾಗುತ್ತೇನೆ. ಸೋತಿದ್ದೇನೆಂದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ನನಗಿಲ್ಲ’ ಎಂದು ಚೆಲುವರಾಯ ಸ್ವಾಮಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಬಿಎಸ್ ಪಿ ನಾಯಕಿ ಮಾಯಾವತಿ ಮುಂದಿನ ಪ್ರಧಾನಿ ಅಭ್ಯರ್ಥಿ! ಕಾಂಗ್ರೆಸ್ ಜತೆಗೂ ಚರ್ಚೆ!