Select Your Language

Notifications

webdunia
webdunia
webdunia
webdunia

ಅತೀದೊಡ್ಡ ಕೆರೆ ಹೊಂದಿರುವ ಗುಡ್ಡದಲ್ಲಿ ಕಾಡ್ಗಿಚ್ಚು…!

ಅತೀದೊಡ್ಡ ಕೆರೆ ಹೊಂದಿರುವ ಗುಡ್ಡದಲ್ಲಿ ಕಾಡ್ಗಿಚ್ಚು…!
ದಾವಣಗೆರೆ , ಮಂಗಳವಾರ, 15 ಜನವರಿ 2019 (16:04 IST)
ಭಾರತದ ದೊಡ್ಡ ಹಾಗೂ ಏಷ್ಯಾ ಖಂಡದ ಎರಡನೇ ಅತೀದೊಡ್ಡ ಕೆರೆ ಹೊಂದಿರುವ ಗುಡ್ಡದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದೆ.

ಬೆಂಕಿಯ ಕೆನ್ನಾಲಿಗೆಗೆ ಗಿಡಮರಗಳು ಸುಟ್ಟು ಕರಕಲಾಗುತ್ತಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡಗಳು ಬೆಂಕಿಗೆ ಭಸ್ಮವಾಗುತ್ತಿವೆ. ಇಲ್ಲಿನ ಕೆರೆಬಿಳಚಿ, ರುದ್ರಾಪುರ, ಸೂಳೆಕೆರೆಯ ಗುಡ್ಡದಲ್ಲಿ ಸಾಲುಸಾಲು ರೀತಿಯಲ್ಲಿ ಬೆಂಕಿ ಕಾಡ್ಗಿಚ್ಚಿನ ರೂಪದಲ್ಲಿ ಕಾಣಿಸಿಕೊಂಡಿದೆ. ಸಂಬಂಧಪಟ್ಟವರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಜನರು ದೂರಿದ್ದಾರೆ.  

ಅಲ್ಲದೆ ಸಂಕ್ರಾಂತಿ ಹಬ್ಬಕ್ಕೆಂದು ಗುಡ್ಡದ ಸೌದರ್ಯ ಸವಿಯಲು ಬಂದವರಿಗೆ ಬೆಂಕಿಯಿಂದ ಗುಡ್ಡವು ಬೂದಿ ಬೂದಿಯಾಗಿ ಕಾಣಿಸುತ್ತಿದೆ. ನಿನ್ನೆಯಿಂದ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಇಂದು ಮುಂಜಾನೆಯಿಂದಲೂ ಬೆಂಕಿ ಹೊತ್ತಿ ಉರಿಯುತ್ತಿದೆ. ಬೆಂಕಿ ಹೊತ್ತಿರುವ ಜಾಗದಲ್ಲಿ ವಿದ್ಯುತ್ ವೈರ್ ಗಳು ಹರಿದಿದ್ದರೂ ಸಂಬಂಧ ಪಟ್ಟವರು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗುಡ್ಡಕ್ಕೆ ಭೇಟಿ ನೀಡಿದ ಜನರು ದೂರಿದ್ದಾರೆ.  

 

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗದ ಮೇಲೆ ಸೂರ್ಯ ಕಿರಣದ ಸ್ವರ್ಶ!