Select Your Language

Notifications

webdunia
webdunia
webdunia
webdunia

ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತದ್ಯಾಕೆ?

ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತದ್ಯಾಕೆ?
ಬಾಗಲಕೋಟೆ , ಭಾನುವಾರ, 19 ಆಗಸ್ಟ್ 2018 (17:20 IST)
ಕುಡಿಯುವ ನೀರಿನ ಪೈಪ್ ದುರಸ್ತಿ ಯಾದರೂ ಕೂಡ ರಸ್ತೆಯಲ್ಲಿನ ತಗ್ಗು ಮುಚ್ಚದೇ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹೀಗಾಗಿ ವಾಹನಗಳ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ.

ಬಾಗಲಕೋಟ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ಈ ಘಟನೆ ಜರುಗಿದೆ. ಬನಹಟ್ಟಿ ನಗರದ ಸೋಮವಾರ ಪೇಟೆಯಲ್ಲಿ‌ ಕಳೆದ ಮೂರು ವಾರಗಳಿಂದ ಅಶೋಕ ಕಾಲೋನಿ ಕುಡಿಯುವ ನೀರು ಪೈಪು ಒಡೆದು ಹೋಗಿತ್ತು. ಅದರ ದುರಸ್ಥಿಗಾಗಿ ತಗ್ಗು ತೆಗೆಯಲಾಗಿತ್ತು. ಆದರೆ ಕೆಲಸ ಮುಗಿದು ಹೋದ್ರೂ ಕೂಡ ನಗರಸಭೆ ಸಿಬ್ಬಂದಿ ಮಾತ್ರ ತೆಗ್ಗು ಮುಚ್ಚದೇ ಹಾಗೇ ಹೋಗಿದ್ದಾರೆ.

ಇದರ ಬಗ್ಗೆ ಸ್ಥಳೀಯರು ಅಧಿಕಾರಗಳ ಗಮನಕ್ಕೆ ತಂದ್ರು ‌ಇದಕ್ಕೆ ಕ್ಯಾರೆ ಅನ್ನುತ್ತಿಲ್ಲ. ಹೀಗಾಗಿ ರಾತ್ರೀ ಸಂದರ್ಭದಲ್ಲಿ ಬರುವ ವಾಹನಗಳಿಗೆ ಮೃತ್ತು ಕೂಪವಾಗಿ ತೆಗ್ಗು ಕಾದು ಕುಳಿತಿರುವದು ಜನರನ್ನು ಭಯಭೀತಿಗೊಳಿಸಿದೆ. ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕಿದೆ.






Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗು-ಕೇರಳ ಸಂತ್ರಸ್ತರಿಗೆ ಶಾಮನೂರು ಶಿವಶಂಕರಪ್ಪ ನೆರವು