ವೈನ್ ಸ್ಟೋರ್ ನಲ್ಲಿ ಅಂಥದ್ದು ಏನಾಯ್ತು?

ಸೋಮವಾರ, 11 ಫೆಬ್ರವರಿ 2019 (14:34 IST)
ವೈನ್ ಸ್ಟೋರ್ ವೊಂದರಲ್ಲಿ ಆಗಬಾರದ ಘಟನೆ ಆಗಿಹೋಗಿದೆ.
ವೈನ್ ಶಾಪ್ ವೊಂದರ ರೋಲಿಂಗ್ ಷಟರ್ ಮುರಿದು ಒಳನುಗ್ಗಿರುವ ಚೋರರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಕೋಲಾರದ ಬೂದಿಕೋಟೆಯ ವೈನ್ ಶಾಪ್ ನಲ್ಲಿ ಕಳ್ಳತನ ನಡೆದಿದೆ.

ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿರುವ ವೆಂಕಟೇಶ್ವರ ವೈನ್ ಶಾಪ್ ನಲ್ಲಿ ಕಳ್ಳತನ ಮಾಡಲಾಗಿದೆ.  
ವೈನ್ ಶಾಪ್ ನಲ್ಲಿ 20ಕ್ಕೂ ಸಾವಿರಕ್ಕೂ ಹೆಚ್ಚು ಮೌಲ್ಯದ ಮದ್ಯದ ಬಾಟಲಿಗಳನ್ನು ಚೋರರು ದೋಚಿದ್ದಾರೆ. 

ಸಿಸಿಟಿವಿ ಕ್ಯಾಮರಾ ನಾಶಪಡಿಸಿ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಗಳನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING