Select Your Language

Notifications

webdunia
webdunia
webdunia
webdunia

ಬರದನಾಡಲ್ಲಿ ನೆಲದಿಂದ ಉಕ್ಕುತ್ತಿರೋ ಜಲ: ವಿಸ್ಮಯ

ಬರದನಾಡಲ್ಲಿ ನೆಲದಿಂದ ಉಕ್ಕುತ್ತಿರೋ ಜಲ: ವಿಸ್ಮಯ
ಚಿಕ್ಕಮಗಳೂರು , ಗುರುವಾರ, 15 ನವೆಂಬರ್ 2018 (14:37 IST)
ಬರದ ನಾಡಿನಲ್ಲಿ ನೆಲದಿಂದ ಉಕ್ಕುತ್ತಿರುವ ಜಲಧಾರೆ ನೋಡುಗರಲ್ಲಿ ವಿಸ್ಮಯಕ್ಕೆ ಕಾರಣವಾಗಿದೆ.

ಬೋರ್‍ವೆಲ್‍ನಿಂದ ಚಿಮ್ಮುತ್ತಿರೋ ಗಂಗಾ ಮಾತೆ ಆಶ್ಚರ್ಯ ತರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಖಂಡುಗದಹಳ್ಳಿಯಲ್ಲಿ ನಡೆದಿದೆ.

ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿನ ಬೋರ್  ವೆಲ್ ನಿಂದ ಏಕಾ ಏಕಿಯಾಗಿ ನೀರು ಹೊರಬರಲಾರಂಭಿಸಿದೆ. ವರ್ಷದ ಹಿಂದೆ ಕೊರೆಸಿದ್ದ ಬೋರ್‍ವೆಲ್ ಇದಾಗಿದೆ. ವರ್ಷದಿಂದ ಅರ್ಧ ಇಂಚು ನೀರು ಬರುತ್ತಿತ್ತು. ಆದರೆ ಎರಡು ದಿನಗಳಿಂದ ನಿರಂತರವಾಗಿ ಉಕ್ಕುತ್ತಿರೋ ಜಲವನ್ನು ನೋಡಲು ಜನರು ಸೇರುತ್ತಿದ್ದಾರೆ.

ಸೋಮೇಶ್ವರ ಸ್ವಾಮಿಯ ಶಕ್ತಿಗೆ ಉಘೇ ಅಮತ ಭಕ್ತರು ಹೇಳುತ್ತಿದ್ದಾರೆ. ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಈ ತಾಲೂಕು ವ್ಯಾಪ್ತಿಯಲ್ಲಿನ ಬೋರವೆಲ್ ನಿಂದ ನೀರು ಚಿಮ್ಮುತ್ತಿರುವುದು ವಿಸ್ಮಯಕ್ಕೆ ಕಾರಣವಾಗಿದೆ.  




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಎದುರಲ್ಲೇ ಎಂಪಿ-ಕೆಪಿಸಿಸಿ ಕಾರ್ಯಾಧ್ಯಕ್ಷ ವಾಗ್ವಾದ