Select Your Language

Notifications

webdunia
webdunia
webdunia
webdunia

ಸಂದಿವಾತ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಸೂಕ್ತವಾದ ಘಟಕಗಳ ಕೊರತೆ : ಡಾ.ದೇಬಾಸಿಸ್ ದಂಡ

ಸಂದಿವಾತ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಸೂಕ್ತವಾದ ಘಟಕಗಳ ಕೊರತೆ : ಡಾ.ದೇಬಾಸಿಸ್ ದಂಡ
ಬೆಂಗಳೂರು , ಶುಕ್ರವಾರ, 16 ನವೆಂಬರ್ 2018 (19:28 IST)
ಸಂದಿವಾತ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವೆಬ್‌ಸೈಟ್ ಉದ್ಘಾಟನೆ ಮಾಡಲಾಯಿತು. ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘ ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ರುಮಟಾಲಜಿ ತಜ್ಞ ವೈಧ್ಯರ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ದೆಬಾಸಿಸ್ ದಂಡಾ, ಈ ರೋಗ ನಿವಾರಣೆಗೆ ಎಲ್ಲ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸಾ ಘಟಕಗಳಿಲ್ಲ. ಸರ್ಕಾರ ಈ ರೋಗದ ಔಷಧಗಳ ಬೆಲೆ ಕಡಿಮೆ ಮಾಡಿ ಮಾಡುವಂತೆ ಒತ್ತಡ ಹೇರಬೇಕು ಎಂದು ಹೇಳಿದರು.
ವೈದ್ಯರು ಮತ್ತು ರೋಗಿಗಳ ನಡುವೆ ಹೊಸ ಸಂಬಂಧ ಸೃಷ್ಠಿಸಲು ಸಂವಾದ ಕಾರ್ಯಕ್ರಮಗನ್ನು ಏರ್ಪಡಿಸಲಾಗುತ್ತಿದೆ.. ದೇಶದ ಪ್ರತಿಶತ ೨೦% ರಷ್ಟು ಜನರಿಗೆ ಸಂಧಿವಾತ ಸಮಸ್ಯೆ ಇದೆ.ಆದರೆ ಅದಕ್ಕೆ ತಕ್ಕ ತಜ್ಞ ವೈದ್ಯರ ಕೊರತೆ ಇದೆ.  ಇತ್ತೀಚಿನ ದಿನಗಳಲ್ಲಿ ರೋಗಿಗಳು ಮತ್ತು ವೈದ್ಯರ ಸಂವಾದಗಳ ಮೂಲಕ ಈ ರೋಗ ನಿವಾರಣೆಗೆ ಪೂರಕ ವಾತಾವರಣ ನಿರ್ಮಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
 
ಭಾರತೀಯ ಪ್ರತಿಯೊಂದು ಆಹಾರವೂ ಆರೋಗ್ಯಕ್ಕೆ ಉತ್ತಮವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದನ್ನು ಬಿಟ್ಟು ಆಧುನಿಕ ಜೀವನ ಶೈಲಿಯಿಂದ ಆರೋಗ್ಯದಲ್ಲಿ ಏರು ಪೇರಾಗುತ್ತಿದೆ. ಸಂಧಿವಾತ ರೋಗಿಗಳು ಹಾಗೂ ವೈದ್ಯರು ಸೇರಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಬೇಕು.  ಔಷಧ ತಯಾರಿಕೆ ಉತ್ಪಾದನಾ ವೆಚ್ಚ ಕಡಿಮೆ ಇದ್ದರೂ, ಡ್ರಗ್ಸ್ ಕಂಪನಿಗಳು ಸರ್ಕಾರಗಳನ್ನೇ ನಿಯಂತ್ರಣ ಮಾಡುವ ಶಕ್ತಿ ಹೊಂದಿವೆ.  ಔಷಧಗಳ ಬೆಲೆ ಕಡಿಮೆ ಮಾಡಲು ರುಮಟಾಲಜಿ ತಜ್ಞ ವೈದ್ಯರ ಸಂಘ ಪ್ರಯತ್ನ ನಡೆಸಿದೆ ಎಂದು ಹೇಳಿದರು.
webdunia
ಇದು ರಾಜ್ಯದಲ್ಲಿ ನಡೆದ ಮೊಟ್ಟಮೊದಲ ಸಂಧಿವಾತ ರೋಗಿಗಳ ಸಮಾವೇಶದಲ್ಲಿ  ಸುಮಾರು ೧೦೦ಕ್ಕೂಹೆಚ್ಚು ಮಂದಿ ಪಾಲ್ಗೊಂಡು ವಿಚಾರವಿನಿಮಯ ಮಾಡಿಕೊಂಡರು.  ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ತುಮಕೂರು, ಮೈಸೂರು, ಕೋಲಾರ ಮುಂತಾದ ಜಿಲ್ಲೆಗಳಿಂದ ರೋಗಿಗಳು ಆಗಮಿಸಿದ್ದರು,. ರೋಗಿಗಳ ಸಮಸ್ಯಗಳಿಗೆ ತಜ್ಞ ವೈಧ್ಯರು ಸೂಕ್ತ ಪರಿಹಾರದ ಸಲಹೆಗಳನ್ನುನೀಡಿದರು.
 
ಕಾರ್ಯಕ್ರಮಸಂಯೋಜನೆ ಮತ್ತು ನಿರೂಪಣೆ ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ಜಂಟಿ-ಕಾರ್ಯದರ್ಶಿ ಡಾ. ನಾಗರಾಜ. ಎಸ್ ಅವರು ಪ್ರಾಸ್ತಾವಿಕ ಭಾಷಣಮಾಡಿದರು.  ಹಿರಿಯ ಸಂಧಿವಾತ ತಜ್ಞ ಡಾ. ಮಹೇಂದ್ರನಾಥ್ ಅವರು ಮಾತನಾಡಿ ತಮ್ಮ ೫ ದಶಕಗಳ ಅನುಭವನ್ನು ಹಂಚಿಕೊಂಡರು.  ಇತ್ತೀಚಿಗೆ ಆಗಿರುವ ಸಂಶೋಧನೆಗಳಿಂದ ವಾಯು ರೋಗ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ಅಮೂಲಾಗ್ರ ಬದಲಾವಣೆ ಉಂಟಾಗಿದೆ,  ಅಲೋಪಥಿ ವೈದ್ಯ ಪದ್ಧತಿಯಲ್ಲಿ ಪರಿಣಾಮಕಾರಿಯಾಗಿ ಕಾಯಿಲೆ ನಿಯಂತ್ರಣ ಸಾಧ್ಯವಿದೆ ಎಂದು ತಿಳಿಸಿದರು. ಕರ್ನಾಟಕ ರುಮಟಾಲಜಿ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ. ಧರ್ಮಾನಂದ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಔಷಧಿಗಳಬಳಕೆಯಲ್ಲಿ ರುಮಟಾಲಜಿ ತಜ್ಞ ವೈದ್ಯರ ಅನುಭವ ಹೆಚ್ಚಿರುವುದರಿಂದ ದುಷ್ಪರಿಣಾಮಗಳನ್ನು ಹಾಗೂ ಅಡ್ಡ ಪರಿಣಾಮಗಳನ್ನು ಬಹುತೇಕ ತಡೆಯಬಹುದು ಎಂದರು.  ಹಿರಿಯ ಸಂಧಿವಾತ ತಜ್ಞರಾದ ಡಾ. ರಮೇಶ್ ಜೊಯಿಸ್, ಚಂದ್ರಶೇಖರ ಅವರು ರೋಗಿಗಳ ಜೊತೆ ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
 
 ಡಾ. ನಾಗರಾಜ. ಎಸ್
 
ರುಮಟಾಲಜಿ ತಜ್ಞ, ಜಂಟಿ ಕಾರ್ಯದರ್ಶಿ, ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘ, ಕರ್ನಾಟಕ ರಾಜ್ಯ ಶಾಖೆ
 
9886504455, 9900602020
 
ಮಾಧ್ಯಮ ಸಂಪರ್ಕ : ದೀಪಕ್ – 8660605954

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರಿನ ಕಾಮಗಾರಿ ಬೇಗ ಪೂರ್ಣಗೊಳಿಸಿ ಎಂದ ಕಾರ್ಯದರ್ಶಿ