Select Your Language

Notifications

webdunia
webdunia
webdunia
webdunia

ಮೋದಿ ಸರಕಾರದಲ್ಲಿ ಜನತೆಗೆ ಸಂಕಷ್ಟ ಎದುರಾಗಿದೆ ಎಂದ ಜೆಡಿಎಸ್ ಅಧ್ಯಕ್ಷ

ಮೋದಿ ಸರಕಾರದಲ್ಲಿ ಜನತೆಗೆ ಸಂಕಷ್ಟ ಎದುರಾಗಿದೆ ಎಂದ ಜೆಡಿಎಸ್ ಅಧ್ಯಕ್ಷ
ಮಂಡ್ಯ , ಭಾನುವಾರ, 28 ಅಕ್ಟೋಬರ್ 2018 (17:56 IST)
ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸುದ್ದಿಗೋಷ್ಟಿ ನಡೆಸಿದ್ದು, ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮೂರು ತಿಂಗಳಿಗೋಸ್ಕರ ಚುನಾವಣೆ ಅಗತ್ಯ ಇರಲಿಲ್ಲ. ಈಗಾಗಲೇ ಫೆಬ್ರವರಿ ತಿಂಗಳಲ್ಲೇ ಲೋಕಸಭೆ ಚುನಾವಣೆ ನಡೆಸುವಂತೆ ಉತ್ತರ ಭಾರತದ ಹಲವು ರಾಜ್ಯಗಳು ಕೇಂದ್ರಗಳನ್ನು ಮನವಿ ಮಾಡಿವೆ. ಮೋದಿ ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ ಎಂದು ದೂರಿದರು.

ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗ್ತಿದೆ. ಇದಕ್ಕೆ ಮೋದಿ ಸರ್ಕಾರ ಕಾರಣ. ಸಾಮಾನ್ಯ ಜನರನ್ನು ಮೋದಿ‌ ಸರ್ಕಾರ ದುರ್ಬಲಗೊಳಿಸ್ತಿದೆ. ಇಂತಹ ಸರ್ಕಾರ ನಮಗೆ ಬೇಕಾ? ಎಂದು ಪ್ರಶ್ನಿಸಿದರು.

ಮೋದಿ ಸರ್ಕಾರ ಜನವಿರೋಧಿ‌ ಆಗಿದ್ದರೂ ಬಿಜೆಪಿ ಸಂಸದರು ಏಕೆ ತುಟಿ ಬಿಚ್ಚುತ್ತಿಲ್ಲ. ಈ ಹಿಂದೆ ಇದೇ ಶೋಭಾ ಕರಂದ್ಲಾಜೆ, ಸದಾನಂದ ಗೌಡ ಪೆಟ್ರೋಲ್ ಬೆಲೆ ಏರಿಕೆ ಆದಾಗ ಪ್ರತಿಭಟಿಸಿದ್ರು. ಈಗ ಏಕೆ ಬಿಜೆಪಿ ನಾಯಕರು ಮಾತನಾಡ್ತಿಲ್ಲ ಎಂದರು.
ರೈತರ ಆತ್ಮಹತ್ಯೆ ಬಗ್ಗೆ ಸಂಸತ್ ನಲ್ಲಿ ಏಕೆ ಚರ್ಚೆ ನಡೆದಿಲ್ಲ ಎಂದ ಅವರು, ಮೋದಿ ರೈತರ ಆತ್ಮಹತ್ಯೆ ಬಗ್ಗೆ ಏಕೆ ಮಾತಾಡ್ತಿಲ್ಲ. ಹಸಿರು ಟವಲ್ ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸುವ ಯಡಿಯೂರಪ್ಪ ಬಾಯ್ಮುಚ್ಚಿ ಕುಳಿತಿದ್ದಾರೆ ಎಂದು ಟೀಕೆ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಬೆಂಕಿ ಅವಘಡ; ಸುಟ್ಟು ಕರಕಲಾದ ಮಹಿಳೆ