ಕೈ ಅತೃಪ್ತರ ನಡೆ ಇನ್ನೂ ನಿಗೂಢ!

ಸೋಮವಾರ, 11 ಫೆಬ್ರವರಿ 2019 (11:41 IST)
ಕಾಂಗ್ರೆಸ್ ನ ಅತೃಪ್ತ ಶಾಸಕರ ನಡೆ ಈಗಲೂ ನಿಗೂಢತೆಯನ್ನು ಕಾಯ್ದುಕೊಂಡಿದೆ.

ಅತೃಪ್ತ ಕೈ ನಾಯಕರಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಬಗ್ಗೆ ಗೊತ್ತಿಲ್ಲ ಎಂದು ಅವರ ಸಹೋದರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಬೆಂಗಳೂರಿನಲ್ಲಿದ್ದಾರೆ ಎನ್ನೋದು ವಾಟ್ಸಪ್ ನಲ್ಲಿ ಬಂತು ಅಷ್ಟೇ ಎಂದಿದ್ದಾರೆ.

ಇನ್ನು, ಕಾಂಗ್ರೆಸ್ ಅತೃಪ್ತ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಎಂದಿರುವ ಅವರು, ರಮೇಶ್ ಬೆಂಗಳೂರಿಗೆ ಬಂದರೆ ಸಂಪರ್ಕ ಮಾಡ್ತೀನಿ ಎಂದೂ ಹೇಳಿದರು. ಸದನಕ್ಕೂ ಹಾಜರ್ ಆಗದ ಕೈ ಶಾಸಕರು ಎಲ್ಲಿಯೂ ಕಾಣಿಸಿಕೊಳ್ಳದಿರುವುದು ಕೂಡಾ ಹುತೂಹಲ ಹೆಚ್ಚುವಂತೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING