Select Your Language

Notifications

webdunia
webdunia
webdunia
webdunia

ಉಚಿತ ಬಸ್‍ಗಾಗಿ ಪ್ರತಿಭಟನೆ; ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿಗಳು ಹಾಜರ್

ಉಚಿತ ಬಸ್‍ಗಾಗಿ ಪ್ರತಿಭಟನೆ; ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿಗಳು ಹಾಜರ್
ತುಮಕೂರು , ಬುಧವಾರ, 11 ಜುಲೈ 2018 (16:35 IST)
ಉಚಿತ ಬಸ್ ಪಾಸ್ ಗಾಗಿ ಪೊಲೀಸರ ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿ ಮುಖಂಡರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡ್ರು. ತುಮಕೂರಿನ ಎಸ್.ಎಸ್.ವೃತ್ತದಲ್ಲಿ ಪ್ರತಿಭಟನೆ ವೇಳೆ ಪೊಲೀಸರು ಏಕಾಏಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಮಾಜಿ ಸಚಿವ ಸೊಗಡು ಶಿವಣ್ಣ ಸಮ್ಮುಖದಲ್ಲಿ ಮಾಧ್ಯಮಗಳ ಮುಂದೆ ತಮ್ಮ ನೋವನ್ನ ತೋಡಿಕೊಂಡ್ರು. ಈ ಬಗ್ಗೆ ಮಾತ್ನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಎಬಿವಿಪಿ ವಿದ್ಯಾರ್ಥಿಗಳ ಮೇಲೆ‌ ಲಾಠಿ ಚಾರ್ಜ ಪ್ರಕರಣವನ್ನ ತೀವ್ರವಾಗಿ ಖಂಡಿಸಿದ್ರು.
ಪೊಲೀಸರ ದೌರ್ಜನ್ಯ  ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ಕೊಡ್ತೀವಿ.  ದರ್ಪ ತೋರಿದ ಪೊಲೀಸ್‌ ಅಧಿಕಾರಿಗಳ ವಿರುದ್ದ ಕ್ರಮವಾಗಬೇಕು. ಇಲ್ಲದಿದ್ದರೆ ಇನ್ನೂ ಉಗ್ರ ಹೋರಾಟ ಮಾಡುತ್ತೇವೆ.

ಈ ನಡುವೆ ವಿದ್ಯಾರ್ಥಿಗಳ ಪಾಲಕರಿಗೆ ರಿಗೆ ಪೊಲೀಸರು ಪೋನ್ ಮಾಡಿ ಭಯಹುಟ್ಟಿಸುತಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದು,  ಪೊಲೀಸರ ಭಯದಿಂದ ಚಿಕಿತ್ಸೆ ಪಡೆಯಲೂ ವಿದ್ಯಾರ್ಥಿಗಳು ಹೊರಕ್ಕೆ‌ ಬರುತ್ತಿಲ್ಲಾ. ನಾವು ಭೇಟಿ ಮಾಡಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಿದ್ದೇವೆ. ಗೃಹ‌ ಸಚಿವರು ದರ್ಪ ತೋರಿದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಮಕ್ಕಳಿಂದ ಶೌಚಾಲಯ ಕ್ಲಿನಿಂಗ್