Select Your Language

Notifications

webdunia
webdunia
webdunia
webdunia

ಮಸ್ತಕಾಭಿಷೇಕಕ್ಕೆ ಒಂದು ರೂಪಾಯಿ ಹಣ ಕೊಡದ ಕೇಂದ್ರ ಸರ್ಕಾರ– ಸಿದ್ದರಾಮಯ್ಯ

ಮಸ್ತಕಾಭಿಷೇಕಕ್ಕೆ ಒಂದು ರೂಪಾಯಿ ಹಣ ಕೊಡದ ಕೇಂದ್ರ ಸರ್ಕಾರ– ಸಿದ್ದರಾಮಯ್ಯ
ಹಾಸನ , ಶನಿವಾರ, 17 ಫೆಬ್ರವರಿ 2018 (19:58 IST)
ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿಯ 88ನೇ ಮಹಾ ಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ ಒಂದು ರುಪಾಯಿ ಕೂಡ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಗೆ ಜಲಾಭಿಷೇಕ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾ ಮಸ್ತಕಾಭಿಷೇಕದ ಎಲ್ಲ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸಿದೆ ಎಂದು ತಿಳಿಸಿದ್ದಾರೆ.
 
ಆರು ಕೋಟಿ ಕನ್ನಡಿಗ ಪರವಾಗಿ ಜಲಾಭಿಷೇಕ ಮಾಡಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ, ನಾಡು ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಮಾತನಾಡುವವರು ಇಲ್ಲವಾಗುತ್ತಿದ್ದಾರೆ– ಅನಂತಕುಮಾರ್ ಹೆಗಡೆ