420 ಎಂದಿದ್ದಕ್ಕೆ ಕ್ಷಮೆ ಕೇಳದಿದ್ರೆ ನಿಮ್ಮ ಹಗರಣಗಳನ್ನು ಬಿಚ್ಚಿಡುತ್ತೇನೆ- ರೇವಣ್ಣಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ

ಮಂಗಳವಾರ, 12 ಫೆಬ್ರವರಿ 2019 (11:53 IST)
ಬೆಂಗಳೂರು : ರೇಣುಕಾಚಾರ್ಯ 420 ಎಂದು ಹೆಚ್.ಡಿ.ರೇವಣ್ಣ ಅವರ ಹೇಳಿಕೆಗೆ ಇದೀಗ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು,’ಹೆಚ್.ಡಿ.ದೇವೇಗೌಡರ ಸುಪುತ್ರ ರೇವಣ್ಣ ಸತ್ಯಹರಿಶ್ಚಂದ್ರ. ಅವರ ಬಾಯಲ್ಲಿ ಬಹಳ ಆದರ್ಶದ ಮಾತುಗಳು ಬರುತ್ತಿವೆ.  ಹೆಚ್.ಡಿ.ರೇವಣ್ಣ ನೀವು ನನಗಿಂತ ಹಿರಿಯರಿದ್ದೀರಿ. ನನ್ನ ಬಗ್ಗೆ ಕೇವಲವಾಗಿ ಮಾತನಾಡಿ ಫೋರ್ ಟ್ವೆಂಟಿ ಅಂತೀರಿ. ಆಯ್ತು ನಾನು ಫೋರ್ ಟ್ವೆಂಟಿ ಎಂದು ಒಪ್ಪಿಕೊಳ್ಳುತ್ತೇನೆ.


ಆದರೆ ನನ್ನ ಸ್ವಾಭಿಮಾನವನ್ನ ಕೆಣಕಿ ನೀವು ಅಪಮಾನ ಮಾಡಿದ್ದೀರಿ. ನನ್ನ ಬಾಯಲ್ಲೂ ಎಲ್ಲಾ ರೀತಿಯ ಶಬ್ದಗಳು ಬರುತ್ತವೆ. ನಿಮ್ಮ ಹೇಳಿಕೆಗೆ ಕ್ಷಮೆ ಕೇಳದಿದ್ರೆ ನಿಮ್ಮ ಎಲ್ಲಾ ಹಗರಣಗಳನ್ನು ಬಿಚ್ಚಿಡುವ ಕೆಲಸ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾರೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING