Select Your Language

Notifications

webdunia
webdunia
webdunia
webdunia

ಭತ್ತದ ಗದ್ದೆಗೆ ನುಗ್ಗುತ್ತಿರುವ ಗುಡ್ಡದ ಮಣ್ಣು: ಬೆಳೆಗಾರ ಕಂಗಾಲು

ಭತ್ತದ ಗದ್ದೆಗೆ ನುಗ್ಗುತ್ತಿರುವ ಗುಡ್ಡದ ಮಣ್ಣು: ಬೆಳೆಗಾರ ಕಂಗಾಲು
ಶೃಂಗೇರಿ , ಮಂಗಳವಾರ, 21 ಆಗಸ್ಟ್ 2018 (15:15 IST)
ಆ ಗ್ರಾಮದ ಸುಮಾರು 25 ಎಕರೆ ಭತ್ತದ ಗದ್ದೆಗೆ ಗುಡ್ಡದ ಮಣ್ಣು ಜಾರಿ ಬೆಳೆ ಸಂಪೂರ್ಣ ಹಾನಿಯಾಗಿದೆ. ತಿಂಗಳಿಂದ ಮಡಿ ಮಾಡಿ, ಸಸಿ ನೆಟ್ಟಿದ್ದ ರೈತರೀಗ ಆತಂಕಕ್ಕೀಡಾಗಿದ್ದಾರೆ.

 
ಶೃಂಗೇರಿಯ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಸುರಿಯುತ್ತಿರೋ ಗಾಳಿ-ಮಳೆಯಿಂದಾಗಿ ತಾಲೂಕಿನ ಕೆರೆಕಟ್ಟೆ ಸಮೀಪದ ಹುಲುಗಾರುಬೈಲು ಗ್ರಾಮದ ಸುಮಾರು 25 ಎಕರೆ ಭತ್ತದ ಗದ್ದೆಗೆ ಗುಡ್ಡದ ಮಣ್ಣು ಜಾರಿ ಬೆಳೆ ಸಂಪೂರ್ಣ ಹಾನಿಯಾಗಿದೆ.

ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದ್ದರೂ, ಭಾರೀ ಗಾಳಿಯೊಂದಿಗೆ ಸುರಿಯುತ್ತಿರೋ ಸೋನೆ ಮಳೆಯಿಂದ ಗುಡ್ಡದ ಮಣ್ಣು ಸವೆದು ಇಡೀ ಜಮೀನುಗಳಿಗೆ ಆವರಿಸಿಕೊಂಡಿದೆ. ತಿಂಗಳಿಂದ ಮಡಿ ಮಾಡಿ, ಸಸಿ ನೆಟ್ಟಿದ್ದ ರೈತರೀಗ ಆತಂಕಕ್ಕೀಡಾಗಿದ್ದಾರೆ. ಮರಾಠಿ ಜನಾಂಗಕ್ಕೆ ಸೇರಿದ ಇಲ್ಲಿನ ರೈತರು ಮೂಲತಃ ಮಂಗಳೂರಿನವರು. ಬೈನೆ ಮರದ ಕಳ್ಳನ್ನ ಸಂಗ್ರಹಿಸಿ, ಅಡಕೆ ಕೊಯ್ಯುವುದರಲ್ಲಿ ಇವರು ನಿಸ್ಸಿಮರು. ಈಗಲೂ ಅದೇ ಕೆಲಸ ಮಾಡಿಕೊಂಡು ಭೂ ಸುಧಾರಣೆ ಕಾಯ್ದೆಯಡಿ ಅರ್ಧ, ಒಂದು ಎಕರೆ ಜಮೀನಿನಲ್ಲಿ ಮನೆಗೆ ಬೇಕಾದ ಭತ್ತ ಬೆಳೆದುಕೊಂಡು ಜೀವನ ಸಾಗಿಸ್ತಾರೆ.

ಈ ಬಾರಿ ಸುರಿಯುತ್ತಿರುವ ಭಾರೀ ಮಳೆಯಿಂದ ಭತ್ತವೆಲ್ಲಾ ಮಣ್ಣು ಪಾಲಾದ ಹಿನ್ನೆಲೆ ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಕೂಡಲೇ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರೋ ಶೃಂಗೇರಿ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿ ನೀಡಿ ಇಲ್ಲಿನ ರೈತರಿಗೆ ಪರಿಹಾರ ಕೊಡಿಸೋ ಭರವಸೆ ನೀಡಿದ್ದಾರೆ. 





Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸ್ವಕ್ಷೇತ್ರದ ಸರಕಾರಿ ಆಸ್ಪತ್ರೆಯಲ್ಲಿ ಲಂಚದ ಬೇಡಿಕೆ?