Select Your Language

Notifications

webdunia
webdunia
webdunia
webdunia

ಹುತಾತ್ಮ ವೀರ ಯೋಧನ ಕುಟುಂಬಕ್ಕೆ ತಿಂಗಳ ವೇತನ ನೀಡಿದ PSI

ಹುತಾತ್ಮ ವೀರ ಯೋಧನ ಕುಟುಂಬಕ್ಕೆ ತಿಂಗಳ ವೇತನ ನೀಡಿದ PSI
ರಾಯಚೂರು , ಗುರುವಾರ, 21 ಫೆಬ್ರವರಿ 2019 (14:11 IST)
ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮನಾಗಿರುವ ವೀರ ಯೋಧ ಗುರು ಅವರ ಕುಟುಂಬಕ್ಕೆ ಪಿಎಸ್‌ಐ ತಮ್ಮ ತಿಂಗಳ ವೇತನ ನೀಡುವ ಮೂಲಕ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆ ಎಲ್​​.ಪಿ. ಅಗ್ನಿ, ಹುತಾತ್ಮ ಯೋಧ ಗುರು ಸಹೋದರ ಹೊನ್ನಯ್ಯ ಅಕೌಂಟ್‌ಗೆ ತಿಂಗಳ ವೇತನ 46 ಸಾವಿರ ರೂಪಾಯಿ ಹಣವನ್ನ ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿ ಯೋಧನ ಕುಟುಂಬಕ್ಕೆ ಸಹಾಯ ಮಾಡಿ, ಮಾನವೀಯತೆ ಮೆರೆದಿದ್ದಾರೆ. 

ಉಗ್ರರ ಅಟ್ಟಹಾಸಕ್ಕೆ 44 ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅಗ್ನಿ ದುಃಖ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮ ಕೈಲಾದಷ್ಟು ಸಹಾಯ ಮಾಡಿದ್ದಾಗಿ ಅವರು ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಸೇನೆಯ ಮೇಲೆ ಮತ್ತೆ ಭೀಕರ ದಾಳಿಗೆ ಸಂಚು ರೂಪಿಸಿದ ಉಗ್ರರು