Select Your Language

Notifications

webdunia
webdunia
webdunia
webdunia

ಕುಡಿಯುವ ನೀರಿನ ಟ್ಯಾಂಕಿಗೆ ಕ್ರಿಮಿನಾಶಕ ಬೆರೆಸಿದ ದುಷ್ಕರ್ಮಿಗಳು; ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು

ಕುಡಿಯುವ ನೀರಿನ ಟ್ಯಾಂಕಿಗೆ ಕ್ರಿಮಿನಾಶಕ ಬೆರೆಸಿದ ದುಷ್ಕರ್ಮಿಗಳು; ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು
ಯಾದಗಿರಿ , ಗುರುವಾರ, 10 ಜನವರಿ 2019 (12:24 IST)
ಯಾದಗಿರಿ : ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದದ ದುರಂತ ಮಾಸುವ ಮೊದಲ್ಲೇ ಇದೀಗ ಕುಡಿಯುವ ನೀರಿನ ಟ್ಯಾಂಕಿನಲ್ಲಿ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ ಪರಿಣಾಮ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ರಕ್ತವಾಂತಿ ಆಗಿ ಇಂದು ಮೃತಪಟ್ಟ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದಲ್ಲಿ ನಡೆದಿದೆ.


ಪಂಪ್ ಆಪರೇಟರ್ ಮೌನೇಶ್ ತಾಯಿ ಹೊನ್ನಮ್ಮ ಮೃತಪಟ್ಟ ಮಹಿಳೆ. ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದ ಹೊರಭಾಗದಲ್ಲಿರುವ ಬಾವಿಯ ನೀರು ಶಾಖಾಪುರ ಹಾಗೂ ತೆಗ್ಗಳ್ಳಿ ಗ್ರಾಮಕ್ಕೆ ಫಿಲ್ಟರ್ ಅಗಿ ಸರಬರಾಜಾಗ್ತಿತ್ತು. ಆದರೆ ಯಾರೋ ಕಿಡಿಗೇಡಿಗಳು ಬುಧವಾರ  ಈ ನೀರಿಗೆ ಭತ್ತದ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಬೆರೆಸಿದ್ದರು. ಈ ನೀರು ಕುಡಿದ ಪಂಪ್ ಆಪರೇಟರ್ ತಾಯಿ ನಾಗಮ್ಮ ಸೇರಿ ಐವರು ಅಸ್ವಸ್ಥರಾಗಿದ್ದು ಕೆಂಬಾವಿ ಆಸ್ಪತ್ರೆಗೆ ದಾಖಲಾಗಿದ್ದರು.


ತಕ್ಷಣ ಪಂಪ್ ಆಪರೇಟರ್ ಮೌನೇಶ್ ನೀರು ಪೂರೈಕೆ ಸ್ಥಗಿತಗೊಳಿಸಿ ಗ್ರಾಮದಲ್ಲಿ ಯಾರು ಈ ನೀರು ಕುಡಿಯಬೇಡಿ ಎಂದು ಮಾಹಿತಿ ನೀಡಿದ ಹಿನ್ನಲೆಯಲ್ಲಿ ದೊಡ್ಡ ಅನಾಹುತ ತಪ್ಪಿದೆ. ಆದರೆ ಈ ನೀರು ಕುಡಿದ ಪಂಪ್ ಆಪರೇಟರ್ ತಾಯಿ ಹೊನ್ನಮ್ಮ ಚಿಕಿತ್ಸೆ ಫಲಕಾರಿಯಾಗದೆ ರಕ್ತವಾಂತಿ ಆಗಿ ಇಂದು ಮೃತಪಟ್ಟಿದ್ದಾರೆ. ಸದ್ಯ ಬಾವಿಯ ನೀರು ಖಾಲಿ ಮಾಡಿಸಲಾಗ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ ಪ್ರಕರಣ; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ