Select Your Language

Notifications

webdunia
webdunia
webdunia
webdunia

ಎ.ಮಂಜು ಆರೋಪಕ್ಕೆ ರೇವಣ್ಣ ಗರಂ ಆಗಿದ್ಯಾಕೆ?

ಎ.ಮಂಜು ಆರೋಪಕ್ಕೆ ರೇವಣ್ಣ ಗರಂ ಆಗಿದ್ಯಾಕೆ?
ಹಾಸನ , ಶನಿವಾರ, 12 ಜನವರಿ 2019 (17:49 IST)
ಹಾಸನದ ಅಭಿವೃದ್ಧಿ ಕಾಂಗ್ರೆಸ್ ಕಾಲದಲ್ಲೇ ಆಗಿತ್ತು. ಹೀಗಂತ ಎ.ಮಂಜು ಆರೋಪಕ್ಕೆ ಸಚಿವ ರೇವಣ್ಣ ಗರಂ ಆಗಿದ್ದು,
ಅವರು ವಿಷಯ ತಿಳಿದು ಮಾತನಾಡಬೇಕು. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರೆ ನಾನು‌ ಪೊಳ್ಳಾಗಬೇಕಾಗುತ್ತೇವೆ. 10 ವರ್ಷದಿಂದ ಜಿಲ್ಲೆಯ ಅಭಿವೃದ್ಧಿಯಾಗಿಲ್ಲ ಅದನ್ನ ಮಾಡುವುದಷ್ಟೇ ನನ್ನ ಕೆಲಸ ಎಂದು ತಿರುಗೇಟು ನೀಡಿದ್ದಾರೆ.

ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಲೋಕೋಪಯೋಗಿ ‌ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದು, ಹಾಸನ -ಬೇಲೂರು ನಡುವಣ  ರೈಲ್ವೇ ಹಳಿ ಜೋಡನೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ 50:50  ಅನುಪಾತದಲ್ಲಿ ನಡೆಯಲಿದೆ. 
600 ಕೋಟಿ‌ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರೋ ರೈಲು ಮಾರ್ಗ ಇದಾಗಿದೆ. ಬೇಲೂರು ಆಲೂರು ಹಾಸನ ಮಾರ್ಗವಾಗಿ  33 ಕಿ.ಮೀ. ಹಳಿ‌ ಜೋಡನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದರು.

ಹಾಸನದಲ್ಲಿ ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. 255 ಕೋಟಿ ವೆಚ್ಚದಲ್ಲಿ ಜೈಲು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 380 ಕೋಟಿ ರೂ. ವೆಚ್ಚದ ಹೇಮಾವತಿ ಎಡದಂಡೆ ನಾಲೆ ಆಧುನಿಕರಣಕ್ಕೆ  ಅನುಮೋದನೆ ದೊರಕಿದೆ ಎಂದು ಹೇಳಿದರು.  



Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆಗೆ ಶರಣಾಗಿದ್ದ ಅಂಬಿ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ