ಡ್ರಾಪ್ ಕೊಡುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ

ಮಂಗಳವಾರ, 12 ಫೆಬ್ರವರಿ 2019 (19:13 IST)
ಡ್ರಾಪ್ ಕೊಡುವುದಾಗಿ ಹೇಳಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಯುವತಿಯ ಮೇಲೆ  ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಪ್ರಕರಣ ನಡೆದಿದೆ.

ಯುವತಿಯ ಮೇಲೆ ಫೆ. 3 ರಂದು ಸಾಮೂಹಿಕ ಅತ್ಯಾಚಾರ ನಡೆದಿದ್ದು, ಫೆ.8 ರಂದು ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿ ಚಿರಾಗ್ ಅತ್ಯಾಚಾರಕ್ಕೊಳಗಾದ ಯುವತಿಯ ಸ್ನೇಹಿತನಾಗಿದ್ದು, ಡ್ರಾಪ್ ಕೊಡುವ ನೆಪದಲ್ಲಿ ಕೊಳ್ಳೇಗಾಲಕ್ಕೆ ತೆರಳುವ ರಸ್ತೆಯಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಆತನನೊಂದಿಗೆ ಮೂವರು ಯುವಕರು ಸೇರಿಕೊಂಡು ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಫೆ. 3 ರಂದು ರಾತ್ರಿ ಸುಮಾರು 7 ಗಂಟೆಗೆ ಮನೆಯಿಂದ ಡಿನ್ನರ್ ಗೆಂದು ಆಟೋದಲ್ಲಿ ಲಲಿತ್ ಮಹಲ್ ಪ್ಯಾಲೇಸ್ ರಸ್ತೆಯಲ್ಲಿರುವ ಚಾಟ್ ಸೆಂಟರ್ ಗೆ ಹೋಗಿದ್ದೆ. ಅಲ್ಲಿ ನನ್ನ ಸ್ನೇಹಿತೆ ಜೊತೆ ಚಾಟ್ಸ್ ತಿಂದು ಬಳಿಕ ಮನೆಗೆ ಹಿಂದಿರುಗಲು ನನ್ನ ಸ್ನೇಹಿತನಾದ ಚಿರಾಗ್ಗೆ ಕರೆ ಮಾಡಿ ಬರುವಂತೆ ಹೇಳಿದ್ದೆ. ಆತ ಕಾರಿನಲ್ಲಿ ಬಂದು ನನ್ನನ್ನು ಕರೆದುಕೊಂಡು ಕೊಳ್ಳೇಗಾಲದ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದನು.

ದಾರಿಯಲ್ಲಿ ಮೂವರು ಅಪರಿಚಿತರು ಕಾರಿನಲ್ಲಿ ಕುಳಿತುಕೊಂಡರು. ಅವರೆಲ್ಲರೂ ಕುಡಿದಿದ್ದು, ನಾನು ಮೈಸೂರಿಗೆ ಇತ್ತೀಚೆಗೆ ಬಂದಿದ್ದರಿಂದ ನನಗೆ ಮಾರ್ಗ ತಿಳಿದಿರಲಿಲ್ಲ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING