ನಾನು ಹಿಟ್ಲರ್ ಅಲ್ಲ. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡ್ತೀನಿ - ಸ್ಪೀಕರ್ ರಮೇಶ್ ಕುಮಾರ್

ಭಾನುವಾರ, 10 ಫೆಬ್ರವರಿ 2019 (13:59 IST)
ರಾಯಚೂರು : ಆಪರೇಷನ್ ಕಮಲ ದ ಆಡಿಯೋ  ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್, ‘ನಾನು ಹಿಟ್ಲರ್ ಅಲ್ಲ. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡ್ತೀನಿ’ ಎಂದು ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ ಆಪರೇಷನ್ ಕಮಲದ ಆಡಿಯೋ ಕೇಳಿದ್ದೇನೆ. ಯಾರು ಮಾರಾಟ ಆಗುತ್ತಾರೋ, ಯಾರು ದುಡ್ಡು ಕೊಡುತ್ತಾರೋ ಗೊತ್ತಿಲ್ಲ. ಈ ಬಗ್ಗೆ ನಾಳೆ ಸದನದಲ್ಲಿ ಚರ್ಚೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.


‘ಪ್ರಸಕ್ತ ರಾಜಕೀಯ ಬೆಳವಣಿಗೆಗೆ ನೊಂದಿದ್ದೇನೆ. ಇನ್ನೊಬ್ಬರಿಗೆ ನೋವು ಕೊಟ್ಟು ಬದುಕಲು ನಾನು ಇಷ್ಟ ಪಡಲ್ಲ. ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಮ್ಮನ್ನ ನೋಡಿ ಜನ ಪಕ್ಕಕ್ಕೆ ಉಗಿದು ಹೋಗಬಾರದು. ಶಾಸಕರು ಸದನಕ್ಕೆ ಬರಲು ಆಗದಿದ್ರೆ ತಿಳಿಸಬೇಕು. ಗೌರವದಿಂದ ಸದನಕ್ಕೆ ಬರಬೇಕು ಎಂದು ಅವರಿಗೆ ತಿಳಿಯಬೇಕು. ಬರಲು ಆಗದಿದ್ದರೆ ಚುನಾವಣೆಗೆ ಯಾಕೆ ನಿಲ್ಲಬೇಕು ಎಂದು ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING