ಸದನದಿಂದ ಶಿವನಗೌಡ, ರೇಣುಕಾಚಾರ್ಯ ಎದ್ದು ಹೊರ ನಡೆದದ್ಯಾಕೆ?

ಸೋಮವಾರ, 11 ಫೆಬ್ರವರಿ 2019 (12:59 IST)
ಮೈತ್ರಿ ಸರಕಾರದ ಪಕ್ಷಗಳು ಹಾಗೂ ಬಿಜೆಪಿ ಮುಖಂಡರು ಆಡಿಯೋ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಸುತ್ತಿದ್ದರೆ, ಚರ್ಚೆ ನಡುವೆಯೇ ಆಡಿಯೋದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಎದ್ದು ಹೊರನಡೆದಿದ್ದಾರೆ.

ಸದನದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಶಾಸಕ ಶಿವನಗೌಡ ನಾಯಕ್ ಜತೆ ರೇಣುಕಾಚಾರ್ಯ ಹೊರ ನಡೆದಿದ್ದಾರೆ.

ಆಡಿಯೋದಲ್ಲಿ ಶಿವನಗೌಡ ನಾಯಕ್ ಹಾಗೂ ಶರಣಗೌಡ ಮಾತನಾಡಿದ್ದರು. ಈ ಆಡಿಯೋವನ್ನು ಸಿಎಂ ಬಿಡುಗಡೆಗೊಳಿಸಿದ್ದರು. ಇದು ಭಾರಿ ಚರ್ಚೆಗೆ ಸದನದಲ್ಲಿ ಕಾರಣವಾಗುತ್ತಿದೆ. ಆಡಿಯೋದಲ್ಲಿ ಸ್ಪೀಕರ್ ರನ್ನು ಬುಕ್ ಮಾಡಿದ್ದೇವೆ ಹೀಗಂತ ಶಿವನಗೌಡ ನಾಯಕ್, ಶರಣಗೌಡಗೆ ಹೇಳಿದ್ದರು.

ಏತನ್ಮಧ್ಯೆ, ಶಿವನಗೌಡ ನಾಯಕ್-ಶರಣಗೌಡ ನಡುವಿನ ಈ ಆಡಿಯೋ ಸತ್ಯವೋ, ಸುಳ್ಳೋ ಎನ್ನುವುದು ತನಿಖೆಯಾಗಬೇಕು ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING