Select Your Language

Notifications

webdunia
webdunia
webdunia
webdunia

15 ವರ್ಷದ ಹುಡುಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನ ಹೆಡೆಮುರಿ ಕಟ್ಟಿದ್ದು ಹೇಗೆ ಗೊತ್ತಾ?

15 ವರ್ಷದ ಹುಡುಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನ ಹೆಡೆಮುರಿ ಕಟ್ಟಿದ್ದು ಹೇಗೆ ಗೊತ್ತಾ?
ಮುಂಬೈ , ಗುರುವಾರ, 20 ಡಿಸೆಂಬರ್ 2018 (12:58 IST)
ಮುಂಬೈ : ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನೊಬ್ಬನಿಗೆ  15 ವರ್ಷದ ಹುಡುಗಿಯೊಬ್ಬಳು ದೃಷ್ಟಿ ಸಮಸ್ಯೆ ಇದ್ದರೂ ತಾನು ಕಲಿತ ಕರಾಟೆ ವಿದ್ಯೆಯಿಂದ ಕೈಕಾಲು ಮುರಿದು ಪೊಲೀಸರಿಗೊಪ್ಪಿಸಿದ ಘಟನೆ ಮುಂಬೈನ ದಾದರ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಹುಡುಗಿ ರಾತ್ರಿಯ ವೇಳೆ 56 ವರ್ಷದ ತನ್ನ ತಂದೆಯ ಜೊತೆ  ದಾದರ್ ರೈಲ್ವೆ ನಿಲ್ದಾಣಕ್ಕೆ ಬಂದು ಅಂಗವೀಕಲರಿಗೆಂದು ಮೀಸಲಾಗಿರಿಸಿದ ಕಂಪಾರ್ಟ್ ಮೆಂಟ್ ನಲ್ಲಿ ಕುಳಿತುಕೊಂಡಿದ್ದಾಗ 24 ವರ್ಷದ ಯುವಕನೊಬ್ಬ ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಗ ಹೆದರದ ಹುಡುಗಿ ಶಾಲೆಯಲ್ಲಿ ಕಲಿತ ಕರಾಟೆ ವಿದ್ಯೆಯನ್ನು ಆತನ ಮೇಲೆ ಪ್ರಯೋಗಿಸಿ ಆತನ ಕೈ ತಿರುಗಿಸಿ ನೋವು ಪಡುವಂತೆ ಮಾಡಿದ್ದಾಳೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾಳೆ. ಬಾಲಕಿಯ ಈ ಧೈರ್ಯವನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

 

ಅಲ್ಲದೇ ಆರೋಪಿ ಅಕ್ರಮವಾಗಿ ಮತ್ತು ಟಿಕೆಟ್‌ ರಹಿತವಾಗಿ ವಿಶೇಷ ಕಂಪಾರ್ಟ್‌ಮೆಂಟ್‌ನಲ್ಲಿ ಸಂಚರಿಸುತ್ತಿದ್ದ ಎಂಬ ವಿಚಾರ ಈ ಘಟನೆಯಿಂದ ತಿಳಿದುಬಂದಿದೆ.

 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಾತ್ ರೂಂ ನಲ್ಲಿ 22 ವರ್ಷದ ಯುವತಿ ಸ್ನಾನಮಾಡುತ್ತಿದ್ದಾಗ 14 ವರ್ಷದ ಬಾಲಕ ಮಾಡಿದ್ದೇನು ಗೊತ್ತಾ?