ಅತೀ ಹೆಚ್ಚು ಭಾರ ಎಳೆದವರಿಗೆ ಬಂಗಾರದ ಬಂಪರ್ ಬಹುಮಾನ

ಭಾನುವಾರ, 15 ಜುಲೈ 2018 (16:19 IST)
ಅತೀ ಹೆಚ್ಚು ಭಾರ ಎಳೆದವರಿಗೆ ಬಂಗಾರದ ಬಹುಮಾನ, ಬೆಳ್ಳಿಯ ಖಡ್ಗ ಹಾಗೂ ಬೆಳ್ಳಿಯ ಬಂಪರ್ ಬಹುಮಾನ ವಿತರಣೆ ಮಾಡಲಾಗುತ್ತಿದೆ. ಅಂದಹಾಗೆ ಮಣ್ಣೆತ್ತಿನ ಅಮವಾಸ್ಯೆ ಪ್ರಯುಕ್ತ  ಭಾರ ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಮಣ್ಣೆತ್ತಿನ‌ ಅಮವಾಸ್ಯೆ ಪ್ರಯುಕ್ತ  ಭಾರ ಎಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 1 ಟನ್ 750 ಕೆ ಜಿ ಭಾರದ ಕಲ್ಲೆಳೆಯುವ ಸ್ಪರ್ಧೆ ಲಿಂಗಸುಗೂರ ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಗುರುಗುಂಟಾ ಸಂಸ್ಥಾನದ ರಾಜಾಸೋಮನಾಥ ನಾಯಕರ ನೇತೃತ್ವದಲ್ಲಿ ಕಾರ್ಯಕ್ರಮ ಇದಾಗಿದೆ.

ಸ್ಪರ್ಧೆಯಲ್ಲಿ ವಿಜೇತರಿಗೆ  ಬಹುಮಾನವಾಗಿ ಬಂಗಾರ ಬೆಳ್ಳಿಯ  ಬಂಪರ್ ಬಹುಮಾನ ವಿತರಣೆ ಮಾಡಲಾಯಿತು.
1/2 ತೊಲಿ ಬಂಗಾರ, 11 ತೊಲಿ‌ ಬೆಳ್ಳಿಯ ಖಡ್ಗ, 9 ತೊಲಿ ಬೆಳ್ಳಿ ಖಡ್ಗ ವಿಜೇತರಿಗೆ ಬಹುಮಾನ ಕೊಡಮಾಡಲಾಯಿತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಕೆಲಸ ಮಾಡುತ್ತಿದ್ದ ಗ್ಯಾರೇಜ್‍ನಲ್ಲೇ ಕಾರು ಕದ್ದರು, ಕೊನೆಗೆ ಪೊಲೀಸರಿಗೆ ಸಿಕ್ಕಿಬಿದ್ದರು!