Select Your Language

Notifications

webdunia
webdunia
webdunia
webdunia

ಮನೆಯಲ್ಲಿ ಬೆಂಕಿ ಅವಘಡ; ಸುಟ್ಟು ಕರಕಲಾದ ಮಹಿಳೆ

ಮನೆಯಲ್ಲಿ ಬೆಂಕಿ ಅವಘಡ; ಸುಟ್ಟು ಕರಕಲಾದ ಮಹಿಳೆ
ಮಂಗಳೂರು , ಭಾನುವಾರ, 28 ಅಕ್ಟೋಬರ್ 2018 (17:50 IST)
ಮನೆಯೊಂದರಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ಮಹಿಳೆಯೊಬ್ಬರು ಸುಟ್ಟು ಭಸ್ಮವಾಗಿದ್ದಾರೆ.

ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಕಾವಳ ಮೂಡೂರು ಸಮೀಪದ ಮನೆ ನಿವಾಸಿ ಕುಮಾರಿ ರೇವತಿ(40) ಮೃತಪಟ್ಟವರು. 
ಬಂಟ್ವಾಳ ತಾಲ್ಲೂಕಿನ ಕಾವಳ ಮೂಡೂರು ಸಮೀಪದಲ್ಲಿ ಮೂರು ಸೆಂಟ್ಸ್ ಜಾಗದಲ್ಲಿ ಮನೆಯೊಂದನ್ನು ಮಾಡಿಕೊಂಡು ತನ್ನ ತಾಯಿ ಜೊತೆಗೆ ವಾಸವಿದ್ದ ಸುಮಾರು 40 ವರ್ಷ ಪ್ರಾಯದ ಕುಮಾರಿ ರೇವತಿಯವರು ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ವಿದ್ಯುತ್ ಅವಘಡದಿಂದ ಉಂಟಾದ ಬೆಂಕಿ ಕೆನ್ನಾಲಿಗೆ ಮನೆಯೊಳಗೆ ರಾಶಿ ಹಾಕಿದ್ದ ಕಟ್ಟಿಗೆಗೆ ಹಿಡಿದ ಪರಿಣಾಮ ಹತ್ತಿರದಲ್ಲಿಯೇ ಮಲಗಿದ್ದ ರೇವತಿ ಅವರಿಗೂ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದಾರೆ.  

ರಾತ್ರಿ ಸುಮಾರು 12.30ರ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಮಾಹಿತಿ ತಿಳಿದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಬಳ್ಲಾಳ್ ಅವರ ನೇತೃತ್ವದ ತಂಡ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿ, ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಹೋಗುವಷ್ಟರಲ್ಲಿ ರೇವತಿಯವರು ಸಂಪೂರ್ಣವಾಗಿ ಸುಟ್ಟು ಹೋಗಿದ್ದರು. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲೆ ನಡೆಸಿ ಹಣ, ಮೊಬೈಲ್ ಸುಲಿಗೆ