Select Your Language

Notifications

webdunia
webdunia
webdunia
webdunia

ರಸ್ತೆಯಲ್ಲಿ ಡಿಸಿಎಂ ಪುತ್ರಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ

ರಸ್ತೆಯಲ್ಲಿ ಡಿಸಿಎಂ ಪುತ್ರಿಯಿಂದ ಅಡ್ಡಾದಿಡ್ಡಿ ಕಾರು ಚಾಲನೆ
ಬೆಂಗಳೂರು , ಸೋಮವಾರ, 3 ಡಿಸೆಂಬರ್ 2018 (11:59 IST)
ಬೆಂಗಳೂರು : ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ  ಮಗಳು ಶನಾ ಪರಮೇಶ್ವರ್ ಬೆಂಗಳೂರು ರಸ್ತೆಗಳಲ್ಲಿ ಅಡ್ಡದಿಡ್ಡಿ ಕಾರನ್ನು ಚಾಲಾಯಿಸಿ ಇದೀಗ ಸುದ್ದಿಯಾಗಿದ್ದಾರೆ.


ಐಷರಾಮಿ ಕಾರಿನಲ್ಲಿ ಡಿಸಿಎಂ ಮಗಳು ಶನಾ ಪರಮೇಶ್ವರ್ ದರ್ಬಾರ್ ನಡೆಸುತ್ತಾ ರಸ್ತೆಯಲ್ಲಿ ಮನಬಂದಂತೆ ಕಾರು ಚಲಾಯಿಸುತ್ತಿದ್ದರು. ಜನನಿಬಿಡ ರಸ್ತೆಯಲ್ಲೇ ಶನಾ ಪರಮೇಶ್ವರ್ ಡ್ರ್ಯಾಗ್ ರೇಸ್, ವ್ಹೀಲಿಂಗ್ ಮಾಡುತ್ತಿದ್ದರು. ಡಿಸಿಎಂ ಪುತ್ರಿಯ ಕಾರುಬಾರಿಗೆ ಇತರೆ ವಾಹನ ಸವಾರರಿಗೆ ತೊಂದರೆಯಾಗಿದೆ.


ಇದನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ. ಆದರೆ ಡಿಸಿಎಂ ಮಗಳ ಈ ವರ್ತನೆಗೆ  ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾರದರ್ಶಕ ಉಡುಗೆ ತೊಟ್ಟು ಜೈಲು ಶಿಕ್ಷೆಗೆ ಗುರಿಯಾದ ಈಜಿಪ್ಟ್ ನಟಿ ರನಿಯಾ ಯುಸೆಫ್