Select Your Language

Notifications

webdunia
webdunia
webdunia
webdunia

ಸರಕಾರ ಸುಭದ್ರವಾಗಿದೆ ಎಂದ ಡಿಸಿಎಂ

ಸರಕಾರ ಸುಭದ್ರವಾಗಿದೆ ಎಂದ ಡಿಸಿಎಂ
ಉತ್ತರಕನ್ನಡ , ಭಾನುವಾರ, 23 ಸೆಪ್ಟಂಬರ್ 2018 (18:28 IST)
ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಶಾಸಕರು ಬೇರೆ ಪಕ್ಷಕ್ಕೆ ಹೊಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ ಹಣಕೋಣಕ್ಕೆ ಬಂದ  ಸಂದರ್ಭದಲ್ಲಿ ಹೇಳಿಕೆ ನೀಡಿದ ಪರಮೇಶ್ವರ್, ಪಕ್ಷದ ಯಾವ ಶಾಸಕರು ರೆಸಾರ್ಟ್ ನತ್ತ ಹೋಗುತ್ತಿಲ್ಲ. ಒಂದಿಬ್ಬರು ಅವರ ಖಾಸಗಿ ಜೀವನಕ್ಕಾಗಿ ಹೋಗಿದ್ದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ. ಇನ್ನು ಬಿಜೆಪಿಗರು ಅಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡೋ ಪ್ರಯತ್ನ ಮಾಡಿ ವಿಫಲವಾಗಿದ್ದಾರೆ. ಸರ್ಕಾರ ಬೀಳಿಸುವ ಬಿಜೆಪಿ ಕನಸ್ಸು ಯಾವುದೇ ಕಾರಣಕ್ಕೂ ನನಸಾಗುವುದಿಲ್ಲ ಎಂದರು.

ಮುಖ್ಯಮಂತ್ರಿ ದಂಗೆ ಅನ್ನುವ ಪದ ಬಳಕೆ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಯಾವ ಸಂದರ್ಭದಲ್ಲಿ ಪದ ಬಳಕೆ ಮಾಡಿದ್ದಾರೆನ್ನುವುದು ನೋಡಲಿ ಎಂದು ಸಿಎಂ ಕುಮಾರಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡರು.

ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲಿ ನಡೆಯಲಿದೆ. ವಿಧಾನ ಪರಿಷತ್ ಚುನಾವಣೆ ಮುಂದಿನ ತಿಂಗಳು ನಡೆಯಲಿದ್ದು ಇದಾದ ನಂತರ ಮಾಡಲಾಗುವುದು. ಅದೇ ಸಂದರ್ಭದಲ್ಲಿ ಖಾತೆ ಬದಲಾವಣೆಯನ್ನ ಸಹ ಮಾಡಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.

ದೇವಸ್ಥಾನಕ್ಕೆ ಭೇಟಿ ನೀಡಿರುವುದರಲ್ಲಿ ವಿಶೇಷವೇನಿಲ್ಲ. ಸಾಮಾನ್ಯವಾಗಿ ದೇವರ ದರ್ಶನಕ್ಕಾಗಿ ಆಗಮಿಸಿದ್ದೇನೆಂದು ಪರಮೇಶ್ವರ್ ಈ ಸಂದರ್ಭದಲ್ಲಿ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಒಂದು ದಿನದ ಗಂಡು ನವಜಾತ ಶಿಶು ಪತ್ತೆ: ಸ್ಥಳೀಯರಿಂದ ರಕ್ಷಣೆ