Select Your Language

Notifications

webdunia
webdunia
webdunia
webdunia

ತುಂಗಾ ತೀರದಲ್ಲಿ ಮೊಸಳೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ

ತುಂಗಾ ತೀರದಲ್ಲಿ ಮೊಸಳೆ ಪ್ರತ್ಯಕ್ಷ: ಜನರಲ್ಲಿ ಹೆಚ್ಚಿದ ಆತಂಕ
ಕೊಪ್ಪಳ , ಶನಿವಾರ, 21 ಜುಲೈ 2018 (18:06 IST)
ಬರೋಬ್ಬರಿ  8 ವರ್ಷಗಳ ನಂತರ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಆಣೆಕಟ್ಟೆಯಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ನದಿ ನೀರಿನಲ್ಲಿ ಜಲಚರಗಳು ಹರಿಯುತ್ತಿದ್ದು, ಅವು ನದಿ ತೀರದ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಸಹಜವಾಗಿಯೇ ನದಿ ಪಾತ್ರದ ಜನರು ನದಿ ನೀರಿನ ಜತೆಗೆ ಈಗ, ಜಲಚರಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ಉತ್ತಮವಾಗಿ ಸುರಿಯುತ್ತಿರುವುದರಿಂದ ಕೊಪ್ಪಳ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಜಲಜರಗಳ ಉಪಟಳ ಹೆಚ್ಚಾಗಿದೆ.  ನದಿಯ ನೀರಿನಲ್ಲಿ ಕಸದ ಜೊತೆಗೆ ಮೊಸಳೆಗಳು ಹರಿದು ಬರುತ್ತಿವೆ. ಹೀಗಾಗಿ  ಗಂಗಾವತಿ ತಾಲೂಕಿನ ಚಿಕ್ಕಜಂತಗಲ್ ಹಾಗು ಕಂಪ್ಲಿ ನದಿ ಭಾಗದಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲದೇ ಕಸದಲ್ಲಿ ಸಿಕ್ಕಿ ಹಾಕಿಕೊಂಡು ಮೊಸಳೆ ಹಾಗೂ ಮೊಸಳೆ ಮರಿಗಳು ಪರದಾಡುವ ಮೊಸಳೆಗಳನ್ನು ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಯಾವ ಸಮಯದಲ್ಲಾದರು ಮೊಸಳೆಗಳು ಗ್ರಾಮದಲ್ಲಿ ಪ್ರವೇಶ ಮಾಡಿದರೆ ಏನು ಗತಿ ಎಂದು ಭಯದಲ್ಲಿ ಜನರು ಕಾಲ ಕಳೆಯುವಂತಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಿತೆಯ ಮೇಲೆ 40 ಜನರಿಂದ ನಾಲ್ಕು ದಿನ ನಿರಂತರ ಅತ್ಯಾಚಾರ