ಬಿಜೆಪಿ ಕೊಲೆಗಾರರನ್ನು ರಕ್ಷಣೆ ಮಾಡುತ್ತಿದೆಯಂತೆ!

ಸೋಮವಾರ, 11 ಫೆಬ್ರವರಿ 2019 (17:37 IST)
ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಕೊಲೆಗಳು‌ ನಡೆದಾಗ ಧರ್ಮದ ಬಣ್ಣ ಹಚ್ಚಿ  ಬೆಂಕಿ ಹಚ್ಚಿದ್ದ ಬಿಜೆಪಿ ಇವತ್ತು ಕೊಲೆಗಾರರನ್ನು ರಕ್ಷಣೆ ಮಾಡೋ ಕೆಲಸ ಮಾಡುತ್ತಿದೆ. ಹೀಗಂತ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ.

ಉಡುಪಿಯ ಕೋಟ ಜೋಡಿ ಕೊಲೆ ಪ್ರಕರಣ ಖಂಡಿಸಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಯಿತು.

ಪ್ರಮುಖ ಅರೋಪಿ  ಬಿಜೆಪಿ  ಜಿಲ್ಲಾ ಪಂಚಯತ್ ಸದಸ್ಯ ರಾಘವೇಂದ್ರ ಕಾಂಚನ್ ರಾಜೀನಾಮೆ ನೀಡುವಂತೆ ಆಗ್ರಹ ಮಾಡಿ, ಬಿಜೆಪಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ದವರೇ ಇವತ್ತು  ಕೊಲೆಗಾರರನ್ನು ರಕ್ಷಣೆ ಮಾಡುತ್ತಿದ್ದಾರೆ. ಆರೋಪಿಗಳನ್ನ ರಕ್ಷಿಸಲು ಪೊಲೀಸರಿಗೆ ಬಿಜೆಪಿ ಒತ್ತಡ ಹಾಕುತ್ತಿದೆ. ಬಿಜೆಪಿಯ ಅಸಲು ಬಣ್ಣ ಬಯಲಾಗಿದೆ. ಜಿಲ್ಲಾ ಪಂಚಯತ್ ಸದಸ್ಯನನ್ನ ಉಚ್ಚಾಟನೆ ಮಾಡಬೇಕೆಂದು ಒತ್ತಾಯ ಮಾಡಿದರು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING