ಕೈ ಶಾಸಕರ ಅನರ್ಹಕ್ಕೆ ಕಾಂಗ್ರೆಸ್ ಮನವಿ

ಸೋಮವಾರ, 11 ಫೆಬ್ರವರಿ 2019 (19:52 IST)
ಕಾಂಗ್ರೆಸ್ ನ ಅತೃಪ್ತ ನಾಲ್ವರು ಶಾಸಕರ ವಿರುದ್ಧ ಶಿಸ್ತು ಕ್ರಮಕ್ಕೆ ಕೈಪಡೆಯ ನಾಯಕರು ಮುಂದಾಗಿದ್ದಾರೆ.  

 ಕಾಂಗ್ರೆಸ್ ನಾಲ್ಕು ಮಂದಿ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಸಂಬಂಧ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ.ಸಿ.ಎಂ. ಪರಮೇಶ್ವರ್ ಅವರೊಂದಿಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಶಾಸಕರ ಅನರ್ಹಗೊಳಿಸುವ ಸಂಬಂಧ ಚರ್ಚೆ ನಡೆಸಿದರು.

ಗೈರು ಹಾಜರಾಗಿದ್ದ ಶಾಸಕರಾದ ರಮೇಶ್ಜಾರಕಿಹೊಳಿ, ಡಾ. ಉಮೇಶ್ಜಾಧವ್, ನಾಗೇಂದ್ರ ಮತ್ತು ಮಹೇಶ್ ಕಮಟಹಳ್ಳಿ ಇವರನ್ನು ಅನರ್ಹಗೊಳಿಸುವ ಬಗ್ಗೆ ಮೂರು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.   


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

LOADING