ಬಿ.ಎಸ್ ಯಡಿಯೂರಪ್ಪಗೆ ವಯಸ್ಸಾಗಿದೆ ಎಂದ ಎಂ.ಸಿ ಮನಗೂಳಿ

ಬುಧವಾರ, 19 ಸೆಪ್ಟಂಬರ್ 2018 (15:11 IST)
ಚಿಕ್ಕಬಳ್ಳಾಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪಗೆ ವಯಸ್ಸಾಗಿದೆ. ಮೊದಲು ಇದ್ದ ಹಾಗೆ ಹುರುಪು, ಉತ್ಸಾಹ ತಿರುಗಾಟ ಇಲ್ಲ. ಬಿಎಸ್ ವೈ ಫೇಸ್ ವ್ಯಾಲು ಕಡಿಮೆಯಾಗಿದೆ ಎಂದು ತೋಟಗಾರಿಕಾ ಸಚಿವ ಎಂ.ಸಿ ಮನಗೂಳಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10-12 ಜನ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮಾಡಿ ಸಮ್ಮಿಶ್ರ ಸರ್ಕಾರ ಉರುಳಿಸಲು ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ ಬಿಜೆಪಿಯವರು ಕರೆದರೆ ಕಾಂಗ್ರೆಸ್ ನವರು, ಜೆಡಿಎಸ್ ನವರು ಯಾರು ಹೋಗಲಿಲ್ಲ ಎಂದರು.


ಇನ್ನು ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾವು ಯಾರೂ ಹೋಗುವುದಿಲ್ಲ. ಯಡಿಯೂರಪ್ಪ ಫೇಸ್ ವ್ಯಾಲ್ಯೂ ಕಡಿಮೆಯಾಗಿದೆ. ಅವರು ಮೀಟಿಂಗ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಅವರಿಗೆ ಹೈಕಮಾಂಡ್ ಗಳಾದ ಮೋದಿ, ಅಮಿತ್ ಶಾ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಈಗ  ಯಡಿಯೂರಪ್ಪ  ಅವರ ಹೋರಾಟ ಕಡಿಮೆ ಆಗಿದೆ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಾಲಿನ ಎಟಿಎಂ ಎಂದು ಆರೋಪಿಸಿದ ಬಿಜೆಪಿ