Select Your Language

Notifications

webdunia
webdunia
webdunia
webdunia

ಸರ್ಕಾರಿ ನೌಕರರಿಗೆ ಬ್ಯಾಡ್ ನ್ಯೂಸ್; ಇನ್ನುಮುಂದೆ ಸರ್ಕಾರಿ ರಜೆಗಳಿಗೆ ಬೀಳಲಿದೆ ಕತ್ತರಿ

ಸರ್ಕಾರಿ ನೌಕರರಿಗೆ ಬ್ಯಾಡ್ ನ್ಯೂಸ್; ಇನ್ನುಮುಂದೆ ಸರ್ಕಾರಿ ರಜೆಗಳಿಗೆ ಬೀಳಲಿದೆ ಕತ್ತರಿ
ಬೆಂಗಳೂರು , ಮಂಗಳವಾರ, 20 ನವೆಂಬರ್ 2018 (12:05 IST)
ಬೆಂಗಳೂರು : ಸರ್ಕಾರಿ ರಜೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಹುತೇಕ ಕೆಲಸ ಕಾರ್ಯಗಳು ಸರಿಯಾಗಿ ನಡೆಯದೇ ಇರುವುದರಿಂದ ರಾಜ್ಯ ಸರ್ಕಾರ ರಜೆಗಳನ್ನು ಕಡಿತಗೊಳಿಸಲು ಮುಂದಾಗಿದೆ.


ಸರ್ಕಾರಿ ರಜೆಗಳ ಸಂಖ್ಯೆ ಕಡಿತಗೊಳಿಸುವ ಕುರಿತು ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ ಎಂಬುದಾಗಿ ಸುದ್ದಿಗಾರರೊಂದಿಗೆ  ವಿಧಾನಸೌಧದಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.


2019-20ರ ವರ್ಷದಲ್ಲಿ 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ ಹಾಗೂ 21 ಸಾರ್ವತ್ರಿಕ ರಜಾ ದಿನಗಳು ಬರುತ್ತವೆ. 19 ಸಾಂದರ್ಭಿಕ ರಜೆಗಳು ಇವೆ. ರಜಾ ದಿನಗಳ ಸಂಖ್ಯೆ ವಿಪರೀತವಾಗಿದೆ ಎನ್ನುವ ಮಾತೊಂದು ಸಾಕಷ್ಟು ಬಾರಿ ಸಮಾಜದಲ್ಲಿ ಕೇಳಿ ಬರುತ್ತಿದ್ದು, ಇವುಗಳನ್ನು ರದ್ದು ಮಾಡುವ ಬಗ್ಗೆ ಕೂಡ ಒತ್ತಡ ಹೆಚ್ಚಾಗುತ್ತಿದೆ. ಇದಲ್ಲದೇ ಅಧಿಕಾರಿಗಳಿಗೆ ಅನುಕೂಲವಾಗಲು ವಾರದ ಅಂತ್ಯದಲ್ಲಿ ರಜೆಗಳನ್ನು ನೀಡುವ ಕುರಿತು ಪರಿಶೀಲನೆ ನಡೆಸಬೇಕಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಸಚಿವ ಸಂಪುಟ ಉಪಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಜತೆ ಸಭೆಗೆ ಮೊದಲು ರೈತರನ್ನು ಪರಿಶೀಲಿಸಿ ಒಳಗೆ ಬಿಟ್ಟ ಪೊಲೀಸರು