ಶೌಚಾಲಯಕ್ಕೆ ತೆರಳಿದ ಅಪ್ರಾಪ್ತ ಬಾಲಕಿಗೆ ಐಟಿಐ ವಿದ್ಯಾರ್ಥಿಯಿಂದ ಲೈಂಗಿಕ ಕಿರುಕುಳ

ಗುರುವಾರ, 1 ನವೆಂಬರ್ 2018 (14:38 IST)
ಬೆಂಗಳೂರು : ಶಾಲೆಯ ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ವಿದ್ಯಾರ್ಥಿಯೊಬ್ಬನನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.


ಈ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಬೊಮ್ಮನಹಳ್ಳಿಯ ಖಾಸಗಿ ಶಾಲೆಯಲ್ಲಿ ನಡೆದಿದ್ದು, ಶೌಚಾಲಯಕ್ಕೆ ತೆರಳಿದ ಎರಡನೇ ತರಗತಿಯ ವಿದ್ಯಾರ್ಥಿನಿಗೆ ಐಟಿಐ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಲೈಂಗಿಕ ಕಿರುಕುಳ ನೀಡಿದ್ದಾನೆ.


ಆಗ ವಿದ್ಯಾರ್ಥಿನಿ ಶೌಚಾಲಯದೊಳಗೆ ಕೂಗಾಡುತ್ತಿರುವುದನ್ನು ಕೇಳಿದವರು ವಿದ್ಯಾರ್ಥಿಯನ್ನು ಹಿಡಿದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಆವಲಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ತನ್ನ ಆಸೆ ಈಡೇರಿಸಲು ಮರ್ಮಾಂಗವನ್ನೇ ಕತ್ತರಿಸಿಕೊಳ್ಳಲಿದ್ದಾನಂತೆ ಈತ