Select Your Language

Notifications

webdunia
webdunia
webdunia
webdunia

ಮೇಲ್ವರ್ಗದ ಬಾಲಕಿಗೆ ಚಾಕ್ಲೇಟ್ ನೀಡಿದ್ದಕ್ಕೆ ಆಕೆಯ ಕುಟುಂಬದವರು ಬಾಲಕನಿಗೆ ಮಾಡಿದ್ದೇನು ಗೊತ್ತಾ?

ಮೇಲ್ವರ್ಗದ ಬಾಲಕಿಗೆ ಚಾಕ್ಲೇಟ್ ನೀಡಿದ್ದಕ್ಕೆ ಆಕೆಯ ಕುಟುಂಬದವರು ಬಾಲಕನಿಗೆ ಮಾಡಿದ್ದೇನು ಗೊತ್ತಾ?
ಮುಂಬೈ , ಸೋಮವಾರ, 24 ಸೆಪ್ಟಂಬರ್ 2018 (07:16 IST)
ಮುಂಬೈ : ಮೇಲ್ವರ್ಗದ ಬಾಲಕಿಗೆ ಚಾಕ್ಲೇಟ್ ನೀಡಿದ್ದಕ್ಕೆ 13 ವರ್ಷದ ದಲಿತ ಬಾಲಕನೊಬ್ಬನನ್ನು ಥಳಿಸಿ, ಬೆತ್ತಲಾಗಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ್‍ದ ಗ್ರಾಮವೊಂದಲ್ಲಿ ನಡೆದಿದೆ.


ಹಲ್ಲೆಗೆ ಒಳಗಾದ ಬಾಲಕ ಹಾಗೂ ಹಲ್ಲೆ ಮಾಡಿದ ಕುಟುಂಬದ ಬಾಲಕಿ ಇಬ್ಬರು ಪರಿಚಯಸ್ಥರಾಗಿದ್ದ ಕಾರಣ ಕಳೆದ ತಿಂಗಳು ಶಾಲೆಯಿಂದ ಮನೆಗೆ ಮರಳುತ್ತಿದ್ದ ಆಕೆಗೆ ಬಾಲಕ ಚಾಕ್ಲೇಟ್ ನೀಡಿದ್ದಾನೆ. ಮನೆಗೆ ಹೋದ ಬಾಲಕಿ ಚಾಕ್ಲೇಟ್ ನೀಡಿದ ಕುರಿತು ಮನೆಯವರಿಗೆ ತಿಳಿಸಿದ್ದಾಳೆ. ತಕ್ಷಣವೇ ಬಾಲಕಿಯನ್ನು ಮನೆಯವರು ಮುಂಬೈನಲ್ಲಿದ್ದ ಚಿಕ್ಕಪ್ಪನ ಮನೆಗೆ ಕಳುಹಿಸಿದ್ದರು.


ಆದರೆ ಈ ವಿಷಯ ಬಾಲಕಿಯ ಚಿಕ್ಕಪ್ಪನ ಕಿವಿಗೆ ಬೀಳುತ್ತಲೇ ಆತ ಕೆಲ ಸ್ನೇಹಿತರನ್ನು ಕರೆದುಕೊಂಡು ಬಾಲಕಿಯೊಂದಿಗೆ ಗ್ರಾಮಕ್ಕೆ ಮರಳಿ ಬಾಲಕನ ಮನೆಗೆ ನುಗ್ಗಿ ಆತನಿಗೆ ಥಳಿಸಿ ಬೆತ್ತಲೆ ಮಾಡಿ ಅವನ ಮನೆಯಿಂದ ಗ್ರಾಮ ಪಂಚಾಯತ್‍ವರೆಗೆ ಮೆರವಣಿಗೆ ಮಾಡಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಹಾಪುರ್ ಪೊಲೀಸರು, ಬಾಲಕಿಯ ಇಬ್ಬರು ಸಂಬಂಧಿಕರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಕಾಯ್ದೆ 1989 ಅಡಿ ಪ್ರಕರಣ ದಾಖಲಾಗಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಎರಡೂ ಸಮುದಾಯಗಳ ನಡುವೆ ಸಂಘರ್ಷ ಪ್ರಾರಂಭವಾಗಿದ್ದು, ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಿತ ವ್ಯಕ್ತಿಯಿಂದ ಮಾನಸಿಕ ಕಿರುಕುಳ ; ಆತ್ಮಹತ್ಯೆ ಗೆ ಶರಣಾದ ವಿದ್ಯಾರ್ಥಿನಿ