Select Your Language

Notifications

webdunia
webdunia
webdunia
webdunia

ಮೇಲ್ಜಾತಿಗೆ ಶೇ.10 ಮೀಸಲಾತಿ ವಿಚಾರ; ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಬಿಎಸ್ ವೈ

ಮೇಲ್ಜಾತಿಗೆ ಶೇ.10 ಮೀಸಲಾತಿ ವಿಚಾರ; ಪ್ರಧಾನಿ ಮೋದಿಗೆ ಅಭಿನಂದನೆ  ಸಲ್ಲಿಸಿದ ಬಿಎಸ್ ವೈ
ಶಿವಮೊಗ್ಗ , ಗುರುವಾರ, 10 ಜನವರಿ 2019 (12:33 IST)
ಶಿವಮೊಗ್ಗ : ಕೇಂದ್ರ ಸರ್ಕಾರದಿಂದ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು  ಮೀಸಲಾತಿ ಜಾರಿಗೊಳಿಸಿದ  ವಿಚಾರಕ್ಕೆ ಸಂಬಂಧಿಸಿದಂತೆ ಈ ಕೆಲಸ ಮಾಡಿರುವ ಪ್ರಧಾನಿ ಮೋದಿಗೆ ಬಿ.ಎಸ್.ಯಡಿಯೂರಪ್ಪ ಅಭಿನಂದನೆ  ಸಲ್ಲಿಸಿದ್ದಾರೆ.


ಈ ಕುರಿತು ಮಾತನಾಡಿದ ಅವರು,’ಆರ್ಥಿಕವಾಗಿ ಹಿಂದುಳಿದ ಪ್ರತಿಯೊಂದು ಜನಾಂಗಕ್ಕೆ ಮೀಸಲಾತಿ , ಶಿಕ್ಷಣ, ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೀಸಲಾತಿಯಿಂದ ದೇಶದ 20 ಕೋಟಿ ಜನರಿಗೆ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.
‘ಫೆಬ್ರವರಿಯಲ್ಲಿ ಕೇಂದ್ರದ ಬಜೆಟ್ ಮಂಡನೆ ಇದೆ. ಇನ್ನೂ ಅನೇಕ ಜನಪ್ರಿಯ ಯೋಜನೆಗಳು ಜನರಿಗೆ ಸಿಗಲಿದೆ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರಿನ ಟ್ಯಾಂಕಿಗೆ ಕ್ರಿಮಿನಾಶಕ ಬೆರೆಸಿದ ದುಷ್ಕರ್ಮಿಗಳು; ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು