Select Your Language

Notifications

webdunia
webdunia
webdunia
webdunia

‘ದಿ ವಿಲನ್’ ಚಿತ್ರದ ಸಾಂಗ್ ಲಿರಿಕ್ಸ್ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು ಗೊತ್ತಾ?

‘ದಿ ವಿಲನ್’ ಚಿತ್ರದ ಸಾಂಗ್ ಲಿರಿಕ್ಸ್ ಬಗ್ಗೆ ನಿರ್ದೇಶಕ ಪ್ರೇಮ್ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಶನಿವಾರ, 23 ಜೂನ್ 2018 (07:33 IST)
ಬೆಂಗಳೂರು : ‘ದಿ ವಿಲನ್’ ಚಿತ್ರದ ಸಾಂಗ್ 'ನಿನ್ನೆ ಮೊನ್ನೆ ಬಂದರೋಲ್ಲ ನಂ.1 ಅಂತರಲ್ಲೋ' ಲಿರಿಕ್ಸ್ ಕುರಿತು  ಉಂಟಾದ ವಿವಾದಗಳಿಗೆ ಇದೀಗ ನಿರ್ದೇಶಕ ಪ್ರೇಮ್ ಅವರು ಸ್ಪಷ್ಟನೆ ನೀಡುವುದರ ಮೂಲಕ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ.


ನಿರ್ದೇಶಕ ಪ್ರೇಮ್ ಅವರು ಫೇಸ್ ಬುಕ್ ಲೈವ್ ಗೆ ಬಂದು ಸಿನಿಮಾದ ಲಿರಿಕ್ಸ್ ಬಗ್ಗೆ ಮಾತನಾಡಿ,’ ನಾನು ನನ್ನ ಸಿನಿಮಾದ ಕಥೆಗೆ ತಕ್ಕಹಾಗೆ ಲಿರಿಕ್ಸ್ ಅನ್ನ ಬರೀತಿನಿ . ಈ ಹಾಡಿನ ಸಾಲು ತನ್ನ ಸಿನಿಮಾಗೆ ತಕ್ಕಹಾಗೆ ಇದ್ದು ಇದನ್ನ ಯಾರ ಕಾಲು ಎಳಿಬೇಕು ಅಂತಾನು ಬರೆದಿಲ್ಲ . ಯಾರಿಗೂ ನೋಯಿಸುವ ಉದ್ದೇಶ ನನಗಿಲ್ಲ . ಇದು ಬರೀ ಸಿನಿಮಾದಲ್ಲಿ ಕಥೆಗೆ ಪೂರಕವಾದ ಹಾಡಷ್ಟೆ ಎಂದಿದ್ದಾರೆ.


ಹಾಗೇ ಕನ್ನಡ ಸಿನಿಮಾರಂಗದ ಬಾಸ್ ಯಾರು ಎಂಬುವುದರ ಬಗ್ಗೆ ಮಾತನಾಡಿದ ಅವರು,’ ನನ್ನ ಪಾಲಿಗೆ ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಿ ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕನೇ ಬಾಸ್. ಜೊತೆಗೆ ನಿಮ್ಮ ಹಣವನ್ನ ನೀಡಿ ಸಿನಿಮಾ ನೋಡುವ ಅಭಿಮಾನಿಗಳಾದ ನೀವೆ ನಮಗೆ ಬಾಸ್ ಎಂದಿದ್ದಾರೆ . ಎಲ್ಲರೂ ಸೇರಿ ಕನ್ನಡ ಸಿನಿಮಾರಂಗವನ್ನ ಮೇಲಕ್ಕೆ ಎತ್ತೋಣ ಇಲ್ಲ ಸಲ್ಲದ ವಿವಾದಗಳನ್ನ ಮಾಡಿಕೊಂಡು ಚಿತ್ರರಂಗಕ್ಕೆ ಕೆಟ್ಟ ಹೆಸರು ತರೋದು ಬೇಡ ಅಂತ ಮನವಿ ಮಾಡಿದ್ದಾರೆ .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಪಿರಂಗಿಪುರ’ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್‌‌ ಶೆಟ್ಟಿ ನಟಿಸಲಿದ್ದಾರಾ…?